alex Certify ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದ ‘ಸ್ಪಾ’ ಗಳ ಮೇಲೆ ಪೊಲೀಸ್ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ಚಟುವಟಿಕೆ ನಡೆಸುತ್ತಿದ್ದ ‘ಸ್ಪಾ’ ಗಳ ಮೇಲೆ ಪೊಲೀಸ್ ದಾಳಿ

ಕಾಂಡಿವಲಿ ಪೊಲೀಸರು ಮತ್ತು ಮೀರಾ ಭಯಂದರ್ ವಸಾಯಿ ವಿರಾರ್ (ಎಂಬಿವಿವಿ) ಪೊಲೀಸರು ಕಳೆದ ವಾರ ಮೂರು ಸ್ಪಾಗಳ ಮೇಲೆ ದಾಳಿ ನಡೆಸಿ ಭರ್ಜರಿ ಬೇಟೆಯಾಡಿದ್ದಾರೆ. ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದ ಮತ್ತು ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಐವರು ಮಹಿಳೆಯರು ಸೇರಿದಂತೆ 12 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಫೆಬ್ರವರಿ 11 ರಂದು ಮೊದಲ ಪ್ರಕರಣದಲ್ಲಿ, ಸುಳಿವಿನ ಮೇರೆಗೆ ಕಾಂಡಿವಲಿ ಪೊಲೀಸರು ತಮ್ಮ ಕಡೆಯ ಓರ್ವ ವ್ಯಕ್ತಿಯನ್ನು ಗ್ರಾಹಕನ ಸೋಗಿನಲ್ಲಿ ವೆಸ್ಟ್ ಕಾಂಡಿವಲಿಯ ಎಂಜಿ ರಸ್ತೆ ಬಳಿಯ ಡೆಸ್ಟಿನಿ ಸ್ಪಾಗೆ ಕಳುಹಿಸಿದ್ದಾರೆ. ಈ ವೇಳೆ ಮಾಲೀಕ ಮತ್ತು ಮ್ಯಾನೇಜರ್ ಇಬ್ಬರು ಸ್ಪಾ ಹೆಸರಲ್ಲಿ ಸೆಕ್ಸ್ ರ್ಯಾಕೆಟ್ ನಡೆಸುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ, ಐಪಿಸಿಯ ಸೆಕ್ಷನ್ 370 (3) ಮತ್ತು ಅನೈತಿಕ ಸಂಚಾರ ತಡೆಗಟ್ಟುವಿಕೆ ಕಾಯ್ದೆಯ ಸೆಕ್ಷನ್ 3,4,5 ಮತ್ತು 7 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ಸ್ಪಾದಲ್ಲಿದ್ದ ಮಹಿಳೆಯನ್ನು ರಕ್ಷಿಸಿ ಮಹಿಳಾ ಆಶ್ರಯಧಾಮಕ್ಕೆ ಕಳುಹಿಸಲಾಗಿದೆ. ಮಾಲೀಕ ರಂಜನ್ ಶೆಟ್ಟಿ ಮತ್ತು ಮ್ಯಾನೇಜರ್ ಮಣಿಕಾಂತ್ ನಾಯ್ಡು ಅವರನ್ನು ಬಂಧಿಸಲಾಗಿದೆ ಎಂದು ಕಾಂಡಿವಲಿಯ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದಿನಕರ್ ಜಾಧವ್ ಖಚಿತಪಡಿಸಿದ್ದಾರೆ.

ಎರಡನೇ ಪ್ರಕರಣದಲ್ಲಿ ಫೆಬ್ರವರಿ 11 ರಂದು, ಮೀರಾ ಭಯಂದರ್ ವಸಾಯಿ ವಿರಾರ್ ಪೊಲೀಸರ ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಸೆಲ್, ಲೆ ಸೆರೆನ್ ಸ್ಪಾ ಮೇಲೆ ದಾಳಿ ನಡೆಸಿತು. ಅಲ್ಲಿದ್ದ ಮಹಿಳಾ ಕೆಲಸಗಾರರು ಅಶ್ಲೀಲ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ಗ್ರಾಹಕರ ಸೋಗಿನಲ್ಲಿ ಕಳುಹಿಸಿದ್ದವರು ಖಚಿತಪಡಿಸಿದ್ದರು. ಓರ್ವ ಮಹಿಳೆ, ಒಬ್ಬ ಕೆಲಸಗಾರ, ಮ್ಯಾನೇಜರ್ ಮತ್ತು ಸ್ಪಾ ಮಾಲೀಕರ ವಿರುದ್ಧ ಐಪಿಸಿಯ ಸೆಕ್ಷನ್ 294 (ಅಶ್ಲೀಲ ಕಾಯ್ದೆ) ಮತ್ತು 114 (ಪ್ರಚೋದಕ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕೊನೆಯ ಪ್ರಕರಣದಲ್ಲಿ ಫೆಬ್ರವರಿ 12 ರಂದು, ಕಾಂಡಿವಲಿ (ಪಶ್ಚಿಮ) ಮಿಲಾಪ್ ಥಿಯೇಟರ್ ಬಳಿ ಕಾಂಡಿವಲಿ ಪೊಲೀಸರು ಯುಕೋ ಸ್ಪಾ ಮೇಲೆ ದಾಳಿ ನಡೆಸಿದರು. ಈ ಸ್ಪಾನಲ್ಲಿ ಅಶ್ಲೀಲ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಆರೋಪದ ಮೇಲೆ ಐವರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇನ್ನು ಈ ಸ್ಪಾ ಮಾಲೀಕನಿಗಾಗಿ ಬಲೆ ಬೀಸಿದ್ದೇವೆಂದು ಅಸಿಸ್ಟೆಂಟ್ ಇನ್ಸ್ಪೆಕ್ಟರ್ ವಿರಾಜ್ ಜಗದಾಳೆ ಖಚಿತಪಡಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...