ಅವಿವಾಹಿತರಿಗೆ ಬಂಪರ್ ಕೊಡುಗೆ ನೀಡಲು ಹರಿಯಾಣ ಸರ್ಕಾರ ಮುಂದಾಗಿದೆ. 45 ರಿಂದ 60 ವರ್ಷದೊಳಗಿನ ಅವಿವಾಹಿತ ವ್ಯಕ್ತಿಗಳಿಗೆ ಶೀಘ್ರದಲ್ಲೇ ‘ಪಿಂಚಣಿ’ ಯೋಜನೆ ಆರಂಭಿಸುವುದಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಘೋಷಣೆ ಮಾಡಿದ್ದಾರೆ.
ಕರ್ನಾಲ್ ಜಿಲ್ಲೆಯ ಗ್ರಾಮ ಒಂದರಲ್ಲಿ ನಡೆದ ಜನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವಿವಾಹಿತರಿಗೆ ಪಿಂಚಣಿ ನೀಡುವ ಕುರಿತು ಈಗಾಗಲೇ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇನ್ನೊಂದು ತಿಂಗಳೊಳಗಾಗಿ ಹೊಸ ಯೋಜನೆಯ ಅಧಿಕೃತ ಘೋಷಣೆ ಹೊರ ಬೀಳಲಿದೆ ಎಂದು ತಿಳಿಸಿದ ಅವರು, ಅಲ್ಲದೆ ಮುಂದಿನ ಆರು ತಿಂಗಳಲ್ಲಿ ವೃದ್ಯಾಪ್ಯ ವೇತನವನ್ನು ಮಾಸಿಕ ಮೂರು ಸಾವಿರ ರೂಪಾಯಿಗಳಿಗೆ ಹೆಚ್ಚಿಸುವುದಾಗಿ ಹೇಳಿದ್ದಾರೆ.