ಮಧ್ಯ ಪ್ರದೇಶದ ಪ್ರಸಿದ್ಧ ಭಗೋರಿಯಾ ಉತ್ಸವ ಮಾರ್ಚ್ 11 ರಿಂದ ಶುರುವಾಗಿದ್ದು, ಇದು ಮಾರ್ಚ್ 17 ರ ವರೆಗೆ ನಡೆಯಲಿದೆ. ಈ ಉತ್ಸವದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಉತ್ಸವಕ್ಕೆ ಬಂದವರು ಮೋಜು, ಮಸ್ತಿಗೆ ಸಿಕ್ಕ ಅವಕಾಶವನ್ನು ಬಿಡುವುದಿಲ್ಲ. ಮೇಳದಲ್ಲಿ ಐಸ್ ಕ್ರೀಂ, ಗೋಲ್ಗಪ್ಪಾ ಅಂಗಡಿಗಳು ಗಮನ ಸೆಳೆಯುತ್ತವೆ. ಈ ಮೇಳದ ವಿಶೇಷ ಪಾನ್.
ಯುವಕ ತಾನು ಮನಸೋತ ಯುವತಿಗೆ ಪಾನ್ ನೀಡ್ತಾನೆ. ಯುವತಿ ಪಾನ್ ಸೇವನೆ ಮಾಡಿದ್ರೆ ಆಕೆ ಯುವಕನ ಪ್ರೇಮವನ್ನು ಒಪ್ಪಿಕೊಂಡಂತೆ. ಅವಕಾಶ ನೋಡಿ ಹುಡುಗ, ಹುಡುಗಿ ಅಲ್ಲಿಂದ ಹೋಗ್ತಾರೆ.
ಮದುವೆಯಾದ್ಮೇಲೆ ಮತ್ತೆ ಬರ್ತಾರೆ. ಇದೇ ಕಾರಣಕ್ಕೆ ಇದಕ್ಕೆ ಭಗೋರಿಯಾ ಎಂದು ಹೆಸರಿಸಲಾಗಿದೆ. ಕೆಲಸಕ್ಕಾಗಿ ಪರ ಊರಿಗೆ ಹೋದ ಕಾರ್ಮಿಕರು ಮೇಳಕ್ಕಾಗಿ ಊರಿಗೆ ಬರ್ತಾರೆ. ಹೋಳಿಯವರೆಗೆ ಇಲ್ಲಿಯೇ ಇದ್ದು, ನಂತ್ರ ಕೆಲಸಕ್ಕೆ ಮರಳುತ್ತಾರೆ.
ಭಗೋರಿಯಾ ಉತ್ಸವ ಹೋಳಿ ಹಬ್ಬದ ಇನ್ನೊಂದು ರೂಪವೆಂದು ಕೆಲವರು ಹೇಳ್ತಾರೆ. ಇದನ್ನು ಬುಡಕಟ್ಟು ಸಮುದಾಯ ಆಚರಿಸಿಕೊಂಡು ಬಂದಿದೆ. ಕೊರೊನಾ ಕಾರಣಕ್ಕೆ ಕಳೆಗುಂದಿದ್ದ ಈ ಉತ್ಸವಕ್ಕೆ ಈಗ ಮತ್ತೆ ಮೆರಗು ಬಂದಿದೆ. ಒಂದು ವಾರಗಳಿಂದಲೇ ಈ ಮೇಳಕ್ಕೆ ತಯಾರಿ ಶುರುವಾಗಿದೆ. ಒಂದೊಂದು ದಿನ ಒಂದೊಂದು ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಈ ಉತ್ಸವ ನಡೆಯುತ್ತದೆ.