ಬಿಹಾರ: ಸಭೆಯೊಂದರಲ್ಲಿ ಐಎಎಸ್ ಅಧಿಕಾರಿಯೊಬ್ಬರು ಡೆಪ್ಯೂಟಿ ಕಲೆಕ್ಟರ್‌ಗಳನ್ನು ನಿಂದಿಸುವ ವಿಡಿಯೋ ವೈರಲ್ ಆಗಿದೆ. ಅಧಿಕಾರಿಯಾಗಿರುವ ಕೆ.ಕೆ ಪಾಠಕ್ ಅವರು ಅವಾಚ್ಯ ಶಬ್ದಗಳಿಂದ ಜಿಲ್ಲಾಧಿಕಾರಿಗಳನ್ನು ನಿಂದಿಸಿದ್ದಾರೆ. ಇದರ ವಿಡಿಯೋ ವಿಡಿಯೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಅವರು ಮಾತನಾಡಿರುವ ಅವಾಚ್ಯ ಶಬ್ದಗಳನ್ನು ಮ್ಯೂಟ್ ಮಾಡಿ ವಿಡಿಯೋ ವೈರಲ್ ಮಾಡಲಾಗಿದೆ.
“ಸಿಗ್ನಲ್ ರೆಡ್ ಆಗಿದ್ದರೆ ರಸ್ತೆಯಲ್ಲಿ ಹಾರ್ನ್ ಮಾಡುವುದನ್ನು ನೀವು ನೋಡಿಲ್ಲವೇ? ರೆಡ್ ಸಿಗ್ನಲ್ ಆಗಿದ್ದರೂ ಅವರು ಹಾರ್ನ್ ಮಾಡುವ ಮೂಲಕ ಸದ್ದು ಮಾಡುತ್ತಿದ್ದರು. ಸಾಮಾನ್ಯರ ಮಾತು ಬಿಡಿ. ಜಿಲ್ಲಾಧಿಕಾರಿಗಳ ಪರಿಸ್ಥಿತಿಯೂ ಹೀಗಿದ್ದರೆ ಹೇಗೆ ? ಎಂದು ಪ್ರಶ್ನಿಸುತ್ತಾ ನಡುನಡುವೆ ಕೆಟ್ಟ ಶಬ್ದಗಳಿಂದ ಜಿಲ್ಲಾಧಿಕಾರಿಗಳನ್ನು ನಿಂದಿಸಲಾಗಿದೆ.
ಬಿಹಾರ ಮತ್ತು ಚೆನ್ನೈನ ಟ್ರಾಫಿಕ್ ದೃಶ್ಯಗಳನ್ನು ಹೋಲಿಸಿ ಕೆಕೆ ಪಾಠಕ್ ಅವರು ಈ ರೀತಿ ನಿಂದಿಸಿ ನುಡಿದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ಬಿಹಾರ ಆಡಳಿತ ಸೇವೆಗಳ ಸಂಘದ (ಬಾಸಾ) ಅಧ್ಯಕ್ಷ ಸುನಿಲ್ ತಿವಾರಿ ಅವರು ಕೆಕೆ ಪಾಠಕ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಿವಾರಿ ಅವರನ್ನು ಅಮಾನತುಗೊಳಿಸುವಂತೆ ರಾಜ್ಯ ಆಡಳಿತವನ್ನು ಕೋರಿರುವುದಾಗಿ ಹೇಳಲಾಗಿದೆ.
ಘಟನೆಗೆ ಪ್ರತಿಕ್ರಿಯೆಯಾಗಿ ಬಿಜೆಪಿ ವಕ್ತಾರ (ಬಿಹಾರ) ಟ್ವೀಟ್ ಮಾಡಿದ್ದಾರೆ, “ಐಎಎಸ್ ಕೆ.ಕೆ ಪಾಠಕ್ ಅವರು ಬಹಳ ವಿದ್ಯಾವಂತ ವಿದ್ವಾಂಸರಾಗಿರಬಹುದು. ಆದರೆ ಅವರು ಮಾನಸಿಕ ಖಿನ್ನತೆ ಮತ್ತು ಹತಾಶೆಯಿಂದ ಬಳಲುತ್ತಿದ್ದಾರೆ. ಅವರಿಗೆ ಚಿಕಿತ್ಸೆ ನೀಡಬೇಕಿದೆ ಎಂದಿದ್ದಾರೆ.