alex Certify ಅವಸರವಸರವಾಗಿ ‘ಆಹಾರ’ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಸರವಸರವಾಗಿ ‘ಆಹಾರ’ ಸೇವಿಸ್ತೀರಾ…..? ಹಾಗಾದ್ರೆ ತಪ್ಪದೆ ಇದನ್ನು ಓದಿ

ಅಯ್ಯೋ ನನಗೆ ಸಮಯವೇ ಸಾಕಾಗುತ್ತಿಲ್ಲ. ಎಷ್ಟರ ಮಟ್ಟಿಗೆಂದರೆ ಸರಿಯಾಗಿ ತಿಂಡಿ, ಊಟ ಮಾಡಲು ಸಮಯ ಸಿಗುತ್ತಿಲ್ಲ ಎಂದು ಹೇಳುವವರಿದ್ದಾರೆ.

ಬೇಗ ಬೇಗ ತಿನ್ನುವುದರಿಂದ ಗಂಟಲ ಮೂಲಕ ಬೇಗ ಆಹಾರ ಹೊಟ್ಟೆ ಸೇರುತ್ತದೆ. ಇದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಲ್ಲಿ ಹಾನಿಯಾಗುತ್ತದೆ.

ನಿಮ್ಮ ಮನಸ್ಸಿಗೆ ಪರಿವೇ ಇಲ್ಲದೆ ತಿನ್ನುತ್ತಿದ್ದರೆ ಅದು ದುಷ್ಪರಿಣಾಮವನ್ನು ಬೀರುತ್ತದೆ. ಹಾಗೆಯೇ ನೀವೇನಾದರೂ ಬಹುಬೇಗ ತಿನ್ನುವವರಾಗಿದ್ದರೆ ಏಕೆ ತಿನ್ನಬಾರದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ…..

ಹೀಗೆ ಗಬಗಬನೆ ತಿನ್ನುವುದರಿಂದ ನಮಗೆ ಎಷ್ಟು ತಿನ್ನುತ್ತೇವೆ ಎಂಬ ಅರಿವು ಇರುವುದಿಲ್ಲ. ಹೆಚ್ಚಿನ ಸಮಯದಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುತ್ತೇವೆ. ಇದರಿಂದ ಅನಾವಶ್ಯಕವಾಗಿ ಹೆಚ್ಚಿನ ತೂಕ ಬರುವುದಲ್ಲದೆ ಇನ್ನಿತರ ರೋಗಗಳಿಗೆ ಕಾರಣವಾಗಲಿದೆ. ಇದರಿಂದ ನಿಮ್ಮ ಮೆದುಳಿಗೆ ಹೊಟ್ಟೆ ತುಂಬಿದೆ ಎಂಬ ಅರಿವೇ ಆಗಿರುವುದಿಲ್ಲ. ಇದರಿಂದ ಕ್ಯಾಲೊರಿ ಸಹ ಹೆಚ್ಚಾಗಲಿದೆ.

ಸ್ಥೂಲಕಾಯ ಸಮಸ್ಯೆಯೂ ಕಾಣಿಸಿಕೊಳ್ಳಲಿದ್ದು, ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ಹೀಗೆ ಗಬಗಬನೆ ತಿನ್ನುವವರು ಹೆಚ್ಚಿನ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಕಳಪೆ ಡಯಟ್, ದೈಹಿಕ ಚಟುವಟಿಕೆಯ ಕೊರತೆ ಹಾಗೂ ವಿಲ್ ಪವರ್ ನ ಕೊರತೆಯಿಂದ ಹೀಗಾಗುತ್ತಿದೆ ಎಂದು ಅಂದುಕೊಂಡಿರುತ್ತೀರಿ, ಆದರೆ ಒಮ್ಮೆ ನಿಧಾನವಾಗಿ ಆಹಾರ ಸೇವಿಸಿ ನೋಡಿ ಬಳಿಕ ವ್ಯತ್ಯಾಸ ಗಮನಿಸಿ.

ಹೀಗೆ ದೊಡ್ಡ ದೊಡ್ಡ ತುತ್ತುಗಳನ್ನು ನುಂಗುವುದರಿಂದ ಸರಿಯಾಗಿ ಜೀರ್ಣ ಕ್ರಿಯೆ ಆಗದೆ ಹೊಟ್ಟೆ ನೋವಿಗೆ ಕಾರಣವಾಗಲಿದೆ. ನೀರು ಇಲ್ಲವೇ ಕಾರ್ಬೊನೇಟೆಡ್ ಪೇಯಗಳೊಂದಿಗೆ ಆಹಾರ ಸೇವಿಸುವುದರಿಂದ ಸರಿಯಾಗಿ ಜೀರ್ಣವಾಗದೆ ಹೊಟ್ಟೆ ಉಬ್ಬರದಂತಹ ಹಾಗೂ ಅಜೀರ್ಣದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.

ಈ ರೀತಿ ಮಾಡುವುದರಿಂದ ಸಕ್ಕರೆ ಕಾಯಿಲೆ ಹೆಚ್ಚುವುದಲ್ಲದೆ, ಇನ್ಸುಲಿನ್ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಇದರಿಂದ ರಕ್ತದಲ್ಲಿ ಸಕ್ಕರೆಯ ಅಂಶಗಳು ಜಾಸ್ತಿಯಾಗಿ ಸಕ್ಕರೆ ಕಾಯಿಲೆ ಶುರುವಾಗುತ್ತದೆ.

ಯಾವುದೇ ಕಾರಣಕ್ಕೂ ನಿಮ್ಮ ಊಟವನ್ನು ಬಿಡಬೇಡಿ. ಹಾಗೆಯೇ ಯಾವುದೇ ಕಾರಣಕ್ಕೂ ಟಿವಿ ಮುಂದೆ ಕುಳಿತು, ಮೊಬೈಲ್ ಅಥವಾ ಕಂಪ್ಯೂಟರ್‌ ಬಳಸುವಾಗ ಆಹಾರ ಸೇವನೆಯನ್ನು ಮಾಡಬಾರದು. ಪ್ರಶಾಂತ ವಾತಾವರಣದಲ್ಲಿ ಸಮಾಧಾನದಿಂದ ಊಟ ಮಾಡುವುದನ್ನು ಕಲಿಯಿರಿ. ಅಲ್ಲದೆ ಸರಿಯಾಗಿ ಜಗಿದು ತಿನ್ನಬೇಕು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...