alex Certify ಅವಶ್ಯವಾಗಿ ಸೇವಿಸಿ ಚಪಾತಿ ಜೊತೆ ತುಪ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಶ್ಯವಾಗಿ ಸೇವಿಸಿ ಚಪಾತಿ ಜೊತೆ ತುಪ್ಪ

ಆಹಾರ ಸೇವನೆ ಮಾಡುವ ವಿಧಾನ ಸರಿಯಲ್ಲವೆಂದಾದ್ರೆ ಆಹಾರದಲ್ಲಿರುವ ಸಂಪೂರ್ಣ ಪೌಷ್ಠಿಕಾಂಶ ನಮ್ಮ ದೇಹ ಸೇರೋದಿಲ್ಲ. ಬೆಳಿಗ್ಗೆ ಏನು ತಿನ್ನುತ್ತೇವೆ? ಮಧ್ಯಾಹ್ನ ಏನು ಸೇವನೆ ಮಾಡ್ತೇವೆ ಹಾಗೂ ರಾತ್ರಿ ಏನನ್ನು? ಯಾವ ಪ್ರಮಾಣದಲ್ಲಿ ಹಾಗೂ ಹೇಗೆ ತಿನ್ನುತ್ತೇವೆ ಎಂಬ ಸಂಗತಿಗಳು ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.

ವಿಜ್ಞಾನಿಗಳು, ತಜ್ಞರ ಸಲಹೆ ಇಲ್ಲದೆ ಹಿಂದಿನ ಕಾಲದಲ್ಲಿ ಸೂಕ್ತ ಆಹಾರಗಳನ್ನು ಜನರು ಸೇವನೆ ಮಾಡುತ್ತಿದ್ದರು. ಯಾವ ಆಹಾರವನ್ನು ಯಾವಾಗ ಹಾಗೂ ಯಾವುದರ ಜೊತೆ ಸೇವನೆ ಮಾಡಬೇಕೆಂಬ ವಿಷ್ಯ ಅವರಿಗೆ ತಿಳಿದಿತ್ತು. ಆದ್ರೆ ಈಗಿನ ಕಾಲದಲ್ಲಿ ಎಲ್ಲವೂ ಅದಲು ಬದಲು. ಸೂಕ್ತ ಸಮಯ, ಸೂಕ್ತ ಆಹಾರ ಸೇವನೆ ಮಾಡದೆ ಜನರು ಗ್ಯಾಸ್, ಸ್ಥೂಲಕಾಯ, ಜೀರ್ಣಕ್ರಿಯೆ ಸಮಸ್ಯೆ ಹೀಗೆ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಹಾರ ಸೇವನೆ ವೇಳೆ ಯಾವ ಪದಾರ್ಥದ ಜೊತೆ ಯಾವ ಪದಾರ್ಥ ಸೇವನೆ ಮಾಡಬೇಕು ಎಂಬುದು ಅವಶ್ಯವಾಗಿ ತಿಳಿದಿರಬೇಕು.

ನಮ್ಮ ದೇಹ ಕಬ್ಬಿಣದ ಅಂಶವನ್ನು ಸರಿಯಾಗಿ ಹೀರಿಕೊಳ್ಳಬೇಕಾದಲ್ಲಿ ಅದಕ್ಕೆ ವಿಟಮಿನ್ ಸಿ ಬೇಕಾಗುತ್ತದೆ. ಹಾಗಾಗಿ ಪಾಲಾಕ್ ಜೊತೆ ಟೋಮೋಟೋ ಅಥವಾ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಸೇವನೆ ಮಾಡಬೇಕು. ಕಬ್ಬಿಣದ ಅಂಶವಿರುವ ಪದಾರ್ಥ ಸೇವನೆ ಮಾಡುವ ವೇಳೆ ಅವಶ್ಯವಾಗಿ ಟೋಮೋಟೋವನ್ನು ಬಳಸಿ.

ರಾತ್ರಿ ಕಾಳುಗಳನ್ನು ಸೇವನೆ ಮಾಡಬಾರದು ಎಂದು ಕೆಲವರು ವಾದಿಸ್ತಾರೆ. ಆದ್ರೆ ನೀರಿನಲ್ಲಿ ನೆನೆಸಿಟ್ಟ, ಮೊಳಕೆ ಬಂದ ಕಾಳುಗಳನ್ನು ಯಾವಾಗ ಬೇಕಾದ್ರೂ ಸೇವನೆ ಮಾಡಬಹುದು. ಕೆಲ ಧಾನ್ಯಗಳು ಜೀರ್ಣವಾಗೋದು ನಿಧಾನ. ಫೈಬರ್ ಮತ್ತು ಪ್ರೊಟೀನ್ ಯುಕ್ತ ಧಾನ್ಯಗಳು ಬೇಗ ಹಸಿವಾಗಲು ಕಾರಣವಾಗುತ್ತವೆ. ಇದೇ ಕಾರಣಕ್ಕೆ ರಾತ್ರಿ ಧಾನ್ಯ, ಕಾಳುಗಳನ್ನು ತಿನ್ನುವುದಿಲ್ಲ. ಸರಿಯಾದ ಪ್ರಮಾಣದಲ್ಲಿ ಕಾಳು, ಧಾನ್ಯಗಳನ್ನು ರಾತ್ರಿ ಸೇವನೆ ಮಾಡಿದ್ರೆ ಯಾವುದೇ ಸಮಸ್ಯೆಯಿಲ್ಲ.

ರಾತ್ರಿ ಅನ್ನ ಸೇವನೆ ನಿಲ್ಲಿಸುವ ಅಗತ್ಯವಿಲ್ಲ. ಅನ್ನ ಸುಖ ನಿದ್ರೆಗೆ ಕಾರಣವಾಗುತ್ತದೆ. ಆದ್ರೆ ತೂಕ ಹೆಚ್ಚಾಗುತ್ತದೆ. ಹಾಗಾಗಿ ರಾತ್ರಿ ಸ್ವಲ್ಪ ಪ್ರಮಾಣದಲ್ಲಿ ಅನ್ನ ಸೇವನೆ ಮಾಡುವುದು ಉತ್ತಮ.

ಬಾಳೆಹಣ್ಣು ತಿನ್ನಲು ಮಧ್ಯಾಹ್ನ ಸರಿಯಾದ ಸಮಯ. ಈ ಸಮಯದಲ್ಲಿ ಬಾಳೆಹಣ್ಣು ತಿನ್ನುತ್ತ ಬಂದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಪ್ರಬಲವಾಗುತ್ತದೆ.

ಹಣ್ಣಿನ ಸಲಾಡ್ ಬಹಳ ಒಳ್ಳೆಯದು. ಸೇಬು, ಆವಕಾಡೊ ಹಾಗೂ ಬಾಳೆಹಣ್ಣನ್ನು ಸೇರಿಸಿ ಮಾಡಿದ ಸಲಾಡ್ ಮತ್ತಷ್ಟು ಒಳ್ಳೆಯದು ಎನ್ನುತ್ತಾರೆ ವೈದ್ಯರು.

ಸೀಬೆ ಹಣ್ಣು, ಪಪ್ಪಾಯ ಹಾಗೂ ಕಿವಿ ಹಣ್ಣನ್ನು ಒಟ್ಟಿಗೆ ಸೇವನೆ ಮಾಡುವುದ್ರಿಂದ ಸಾಕಷ್ಟು ಲಾಭಗಳಿವೆ. ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಜೊತೆಗೆ ತೂಕ ಇಳಿಕೆಗೆ ನೆರವಾಗುತ್ತವೆ.

ಗೋಧಿ ಚಪಾತಿ ಜೊತೆ ತುಪ್ಪವನ್ನು ಸೇರಿಸಿ ಹಿಂದಿನವರು ಸೇವನೆ ಮಾಡುತ್ತಿದ್ದರು. ಕೊಬ್ಬಿನಾಂಶವನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿಗೆ ತುಪ್ಪ ಹಾಕದೆ ಗೋಧಿ ಚಪಾತಿ ಸೇವನೆ ಮಾಡುವವರ ಸಂಖ್ಯೆ ಹೆಚ್ಚಿದೆ. ಆದ್ರೆ ಗೋಧಿ ಚಪಾತಿ ಜೊತೆ ಅವಶ್ಯವಾಗಿ ತುಪ್ಪವನ್ನು ಸೇವನೆ ಮಾಡಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ. ಆದರೆ ಇದು ಮಿತ ಪ್ರಮಾಣದಲ್ಲಿದ್ದರೆ ಒಳ್ಳೆಯದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...