ಅಮೆರಿಕಾ ಮೂಲದ ಸಂಶೋಧನಾ ಸಂಸ್ಥೆ ಹಿಡನ್ ಬರ್ಗ್ ವರದಿ ಬಳಿಕ ಅದಾನಿ ಸಮೂಹದ ಷೇರುಗಳ ಮೌಲ್ಯದಲ್ಲಿ ಭಾರಿ ಕುಸಿತವಾದ ಪರಿಣಾಮ ಗೌತಮ್ ಅದಾನಿ ಸಂಪತ್ತಿನಲ್ಲಿ ಇಳಿಕೆಯಾಗಿತ್ತು. ಹೀಗಾಗಿ ವಿಶ್ವ ಸಿರಿವಂತರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದ ಅವರು 33 ನೇ ಸ್ಥಾನಕ್ಕೆ ಕುಸಿದಿದ್ದರು.
ಅಲ್ಲದೆ ಅದಾನಿ ಸಮೂಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದ ಷೇರುದಾರರು ಸಹ ಆತಂಕಕ್ಕೆ ಒಳಗಾಗಿದ್ದರು. ಇದರ ಮಧ್ಯೆ ಕಳೆದ ಕೆಲವು ದಿನಗಳಿಂದ ಅದಾನಿ ಸಮೂಹದ ಶೇರುಗಳ ಮೌಲ್ಯದಲ್ಲಿ ಏರಿಕೆಯಾಗತೊಡಗಿದ್ದು, ಜೊತೆಗೆ ಷೇರುದಾರರ ಆತಂಕವನ್ನು ನಿವಾರಿಸುವ ಕೆಲಸವನ್ನು ಈಗ ಸಂಸ್ಥೆ ಮಾಡಿದೆ.
ಷೇರು ಆಧಾರಿತ 7,374 ಕೋಟಿ ರೂಪಾಯಿ ಸಾಲವನ್ನು ಅವಧಿಗೂ ಮುನ್ನವೇ ಅದಾನಿ ಗ್ರೂಪ್ ಪಾವತಿ ಮಾಡಿದ್ದು, ಇದರಿಂದಾಗಿ ಸಂಸ್ಥೆ ಅಡವಿಟ್ಟಿದ ಷೇರುಗಳಲ್ಲಿನ ಪಾಲನ್ನು ವಾಪಾಸ್ ಪಡೆಯಲಿದೆ. ಇದರ ಜೊತೆಗೆ ಹೂಡಿಕೆದಾರರ ವಿಶ್ವಾಸ ಗಳಿಸಲು ಇತ್ತೀಚೆಗೆ ಗೌತಮ್ ಅದಾನಿ ನೇತೃತ್ವದಲ್ಲಿ ಹಾಂಕಾಂಗ್ ಮತ್ತು ಸಿಂಗಾಪುರದಲ್ಲಿ ರೋಡ್ ಶೋ ನಡೆಸಲಾಗಿದೆ.