ವಿಶ್ವದಲ್ಲಿರುವ ಕೆಲ ವಸ್ತುಗಳನ್ನು ಜನರು ಅಪಶಕುನವೆಂದು ಪರಿಗಣಿಸಿದ್ದಾರೆ. ಕಾಕತಾಳೀಯವೆಂಬಂತೆ ಕೆಲವೊಮ್ಮೆ ನಡೆಯುವ ಘಟನೆಗಳು ಆ ವಸ್ತು ಕೆಟ್ಟದ್ದು ಎನ್ನುವ ತೀರ್ಮಾನಕ್ಕೆ ಜನರು ಬರುವಂತೆ ಮಾಡುತ್ತದೆ. ಈ ಅಪಶಕುನದ ಪಟ್ಟಿಯಲ್ಲಿ ಈ ಫೋಟೋ ಕೂಡ ಒಂದಾಗಿದೆ.
ಸುಂದರವಾಗಿರುವ ಈ ಫೋಟೋ ಎಲ್ಲರನ್ನೂ ಆಕರ್ಷಿಸುತ್ತದೆ. ಮನೆಯಲ್ಲಿಡಲು ಅನೇಕರು ಮನಸ್ಸು ಮಾಡ್ತಾರೆ. ಆದ್ರೆ ಈ ಫೋಟೋ ಹಿಂದಿನ ಸತ್ಯ ಬೆಚ್ಚಿ ಬೀಳಿಸುವಂತಿದೆ. ಇಟಲಿಯ ಪ್ರಸಿದ್ಧ ಕಲಾವಿದ ಜಿಯೋವಾನಿ ಈ ಚಿತ್ರ ರಚಿಸಿದ್ದಾನೆ. ಇದಕ್ಕೂ ಮೊದಲೇ ಅಂದ್ರೆ 1950ರಿಂದಲೇ ಈ ರೀತಿಯ ಅನೇಕ ಫೋಟೋಗಳನ್ನು ಜಿಯೋವಾನಿ ರಚಿಸಿದ್ದಾನೆ. ಜನ ಕೂಡ ಈ ಚಿತ್ರಗಳನ್ನು ಭಾರೀ ಪ್ರಮಾಣದಲ್ಲಿ ಖರೀದಿಸಿದ್ದರು.
ಫೋಟೋ ಮನೆ ಪ್ರವೇಶ ಮಾಡ್ತಿದ್ದಂತೆ ದುರ್ಘಟನೆಗಳು ನಡೆಯುತ್ತಿದ್ದವು. ಯಾವ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ತಾ ಇತ್ತೋ ಆ ಮನೆಯಲ್ಲಿ ಈ ಅಳುವ ಬಾಲಕನ ಫೋಟೋ ಇರ್ತಾ ಇತ್ತು ಎಂದು ಅಗ್ನಿಶಾಮಕ ದಳವೊಂದು ಹೇಳಿದೆ. ಈ ಫೋಟೋ ಇರ್ತಾ ಇದ್ದ ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿತ್ತಂತೆ. ಇದನ್ನು ತಿಳಿದ ಜನರು ಈ ಫೋಟೋವನ್ನು ಶಾಪಗ್ರಸ್ತವೆಂದು ಪರಿಗಣಿಸಿದ್ರು. ಈ ಫೋಟೋಕ್ಕೆ ಬೇಡಿಕೆ ಕಡಿಮೆಯಾಯ್ತು. ಜೊತೆಗೆ ದುರ್ಘಟನೆಗಳ ಸಂಖ್ಯೆ ಕೂಡ ಕಡಿಮೆಯಾಯ್ತು.