ಅಲ್ಲು ಅರ್ಜುನ್ ಅವರ ಬ್ಲಾಕ್‌ಬಸ್ಟರ್ ಹಿಟ್ ಪುಷ್ಪಾ ಚಿತ್ರದ ಹಾಡುಗಳು, ಡೈಲಾಗ್ ಗಳು ಇನ್ನೂ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಕೇಳಿಬರುತ್ತಲೇ ಇದೆ. ಲಿಪ್ ಸಿಂಕ್ ನಿಂದ ಹಿಡಿದು ಐಕಾನಿಕ್ ಡೈಲಾಗ್‌ಗಳವರೆಗೆ ಇಂಟರ್ನೆಟ್ ನಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅಂತರ್ಜಾಲದಲ್ಲಿ ಪುಷ್ಪಾ ಜ್ವರ ಮಾತ್ರ ಇನ್ನೂ ಕಡಿಮೆಯಾದಂತೆ ಕಂಡು ಬಂದಿಲ್ಲ. ಇದೀಗ ಖ್ಯಾತ ಗಾಯಕಿ ಉಷಾ ಉತ್ತುಪ್ ಅವರು ಶ್ರೀವಲ್ಲಿ ಹಾಡಿಗೆ ಬಾಂಗ್ಲಾ ಸ್ಪರ್ಶ ನೀಡಿದ್ದಾರೆ. ತಮ್ಮ ಸುಮಧುರ ಬಾಂಗ್ಲಾ ಹಾಡಿನೊಂದಿಗೆ ಪುಷ್ಪಾ ಟ್ರೆಂಡ್‌ಗೆ ಸೇರಿಕೊಂಡಿದ್ದಾರೆ.
ಆದಿತ್ಯ ಮ್ಯೂಸಿಕ್‌ನಿಂದ ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಉಷಾ ಉತ್ತುಪ್ ಶ್ರೀವಲ್ಲಿಯ ಬಂಗಾಳಿ ಆವೃತ್ತಿಯನ್ನು ತಂಬೂರಿಯೊಂದಿಗೆ ಹಾಡಿದ್ದಾರೆ. ಹಾಡಿನ ಸಾಹಿತ್ಯವನ್ನು ರಾಜೀವ್ ದತ್ತಾ ಬರೆದಿದ್ದಾರೆ. ಫೆಬ್ರವರಿ 28ರಂದು ಹಂಚಿಕೊಂಡಾಗಿನಿಂದ ಈ ವಿಡಿಯೋ ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಮೂಲ ಹಾಡಿನ ಚೌಕಟ್ಟಿನಲ್ಲಿ ಸಾಹಿತ್ಯವು ಎಷ್ಟು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದು ಹಲವರು ಇಷ್ಟಪಟ್ಟಿದ್ದಾರೆ.
ಶ್ರೀವಲ್ಲಿ ಹಾಡನ್ನು ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದು, ಚಂದ್ರಬೋಸ್ ಅವರ ಸಾಹಿತ್ಯವಿದೆ. ಈ ಹಾಡಿನ ಹಿಂದಿ ಆವೃತ್ತಿಯನ್ನು ಜಾವೇದ್ ಅಲಿ ಹಾಡಿದ್ದಾರೆ.
https://www.youtube.com/watch?v=wv8ozBEg-yY