
ಈ ಸಿನಿಮಾದ ಹಾಡು ಹಾಗೂ ಡೈಲಾಗ್ಗಳನ್ನು ಜನರು ಅನುಕರಿಸುತ್ತಿದ್ದಾರೆ. ಅದೇ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡಿದೆ.
ಈ ವಿಡಿಯೋದಲ್ಲಿ ಮದುವೆಯ ದಿಬ್ಬಣದ ಜೊತೆಯಲ್ಲಿ ಬಂದ ಜನರ ಗುಂಪು ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ಹಾಕಿದ್ದ ಸ್ಟೆಪ್ನ್ನು ಅನುಕರಿಸಿದ್ದಾರೆ. ಎಲ್ಲರೂ ಒಮ್ಮೆಲೆ ಅಲ್ಲು ಅರ್ಜುನ್ರಂತೆ ಡ್ಯಾನ್ಸ್ ಮಾಡುತ್ತಲಿದ್ದರೆ ಸುತ್ತಲಿದ್ದ ಜನರು ಇವರಿಗೆ ಏನಾಯ್ತು ಎಂದು ಗೊಂದಲಕ್ಕೆ ಒಳಗಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ,