ತುಮಕೂರು : ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಈಡಾಗಿದ್ದರು. ಜಿಲ್ಲೆಯ ಕೇದಿಗೆಹಳ್ಳಿಯ ಗುಂಡು ತೋಪಿನಲ್ಲಿದ್ದ ಅಲೆಮಾರಿ ಜನಾಂಗದವರು ಕೂಡ ಮಳೆಯ ಹೊಡೆತಕ್ಕೆ ತತ್ತರಿಸಿದ್ದರು.
ಈ ನಿಟ್ಟಿನಲ್ಲಿ ಅಲೆಮಾರಿ ಜನರನ್ನು ಚಿಕ್ಕನಾಯಕನಹಳ್ಳಿ ಪಟ್ಟಣದ ಗಂಜಿ ಕೇಂದ್ರವೊಂದರಲ್ಲಿ ಇಟ್ಟು ಸರ್ಕಾರವೇ ಆಹಾರ ವಿತರಿಸಿತ್ತು.
ಆ ನಂತರ ಮಳೆಯ ಅಬ್ಬರ ಇಳಿಮುಖವಾಗಿ ಜನ- ಜೀವನ ಸಹಜ ಸ್ಥಿತಿಗೆ ಬರುತ್ತಿದ್ದಂತೆ ತಹಸೀಲ್ದಾರ್ ತೇಜಸ್ವಿನಿ ಅವರು. ಈ ಜನರಿಗೆ ಗಂಜಿ ಕೇಂದ್ರ ಖಾಲಿ ಮಾಡುವಂತೆ ಹೇಳಿದ್ದಾರೆ. ಆದರೆ, ಅಲೆಮಾರಿ ಜನಾಂಗದವರು ನಮಗೆ ಸರಿಯಾದ ಸೌಕರ್ಯ ಒದಗಿಸಿ ಕೊಟ್ಟರೆ ಮಾತ್ರ ನಾವು ಇಲ್ಲಿಂದ ಖಾಲಿ ಮಾಡುತ್ತೇವೆ. ಇಲ್ಲವಾದರೆ, ಇಲ್ಲಿಯೇ ಇರುತ್ತೇವೆ ಎಂದು ಹೇಳಿದ್ದಾರೆ.
ಇದಕ್ಕೆ ಒಪ್ಪದ ತಹಸೀಲ್ದಾರ್, ಅಲೆಮಾರಿ ಜನಾಂಗದವರ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಈ ದೂರಿನ ಅನ್ವಯ ತಹಸೀಲ್ದಾರ್ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ.
ಅಲ್ಲದೇ, ಸರ್ಕಾರದಿಂದ ಬರವು ಸೌಲಭ್ಯಗಳು ಬಾರದಂತೆ ನೋಡಿಕೊಳ್ಳಲಾಗುವುದು ಎಂದು ವ್ಯಕ್ತಿಯೊಬ್ಬರಿಗೆ ಹೆದರಿಸಿದ್ದಾರೆ ಎಂಬ ಆರೋಪ ಕೂಡ ಇವರ ಮೇಲೆ ಕೇಳಿ ಬಂದಿದೆ.