ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಸ್ವೀಕರಿಸಿದ 10 ವರ್ಷದ ಬಾಲಕಿ..! 31-12-2021 10:31AM IST / No Comments / Posted In: Latest News, Live News, International ವಿದ್ಯಾರ್ಥಿಗಳು, ಯುವಕರು ಬ್ಲೂವೇಲ್ ಗೇಮ್ ಗೆ ಬಲಿಯಾಗುತ್ತಿದ್ದ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಇದೀಗ 10 ವರ್ಷದ ಬಾಲಕಿಯೊಬ್ಬಳು ತನ್ನ ಎಕೋ ಸಾಧನ ಅಲೆಕ್ಸಾದಲ್ಲಿ ಮಾರಣಾಂತಿಕ ಔಟ್ಲೆಟ್ ಚಾಲೆಂಜ್ ಅನ್ನು ಸ್ವೀಕರಿಸಲು ಪ್ರಯತ್ನಿಸಿದ್ದಾಳೆ. ಈ ವಿಚಾರ ತಿಳಿದ ಆಕೆಯ ತಾಯಿ ಆಘಾತಗೊಂಡಿದ್ದಾರೆ. ಈ ಬಗ್ಗೆ ಬಾಲಕಿಯ ತಾಯಿ ಕ್ರಿಸ್ಟಿನ್ ಲಿವ್ಡಾಲ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಾಲಕಿ ವರ್ಚುವಲ್ ಸಹಾಯಕರನ್ನು ಸವಾಲಿಗೆ ಕೇಳಿದಾಗ ಅಲೆಕ್ಸಾ ಪ್ರತ್ಯುತ್ತರಿಸಿದ ಸಂದೇಶದ ಸ್ಕ್ರೀನ್‌ಶಾಟ್ ಅನ್ನು ಅವರು ಹಂಚಿಕೊಂಡಿದ್ದಾರೆ. ಈ ಆಟದಲ್ಲಿ ಸ್ಪಾರ್ಕ್‌ಗಳನ್ನು ಉಂಟುಮಾಡಲು ನಾಣ್ಯವನ್ನು ಸ್ಲೈಡ್ ಮಾಡುವ ಮೊದಲು ಭಾಗವಹಿಸುವವರು ತಮ್ಮ ಫೋನ್ ಚಾರ್ಜರ್‌ಗಳನ್ನು ಭಾಗಶಃ ಎಲೆಕ್ಟ್ರಿಕ್ ಸಾಕೆಟ್‌ಗೆ ಪ್ಲಗ್ ಮಾಡಬೇಕು. ಈ ಆಟದಲ್ಲಿ ಭಾಗವಹಿಸುವವರು ಸಣ್ಣ ಕಿಡಿಗಳನ್ನು ಮಾತ್ರ ರಚಿಸಲು ಪ್ರಯತ್ನಿಸುತ್ತಾರೆ. ಆದರೆ, ಇದರಿಂದ ಅಗ್ನಿ ಅವಘಡ ಸಂಭವಿಸಬಹುದು. ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿನ ಸವಾಲಿನ ಚಿತ್ರಗಳಲ್ಲಿ ಸಾಕೆಟ್‌ಗಳಿಗೆ ಉಂಟಾಗಬಹುದಾದ ಹಾನಿಯ ಪ್ರಮಾಣವನ್ನು ತೋರಿಸಿವೆ. ಈ ವಿಚಾರ ತಿಳಿದ ನೆಟ್ಟಿಗರು ದಿಗ್ಭ್ರಮೆಗೊಂಡಿದ್ದಾರೆ. ಇನ್ನು ಈ ಬಗ್ಗೆ, ಗ್ರಾಹಕರಿಗೆ ನಿಖರವಾದ ಮಾಹಿತಿಯನ್ನು ಒದಗಿಸಲು ಅಲೆಕ್ಸಾವನ್ನು ವಿನ್ಯಾಸಗೊಳಿಸಲಾಗಿದೆ. ಈ ದೋಷದ ಬಗ್ಗೆ ನಮಗೆ ಅರಿವಾದ ತಕ್ಷಣ, ಅದನ್ನು ಸರಿಪಡಿಸಲು ನಾವು ತ್ವರಿತ ಕ್ರಮ ಕೈಗೊಂಡಿದ್ದೇವೆ ಎಂದು ಅಮೆಜಾನ್ ತಿಳಿಸಿದೆ. OMFG My 10 year old just asked Alexa on our Echo for a challenge and this is what she said. pic.twitter.com/HgGgrLbdS8 — Kristin Livdahl (@klivdahl) December 26, 2021