
ಬಾಲಿವುಡ್ ತಾರಾ ದಂಪತಿಗಳಾದ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಇದಕ್ಕೆ ಪ್ರಮುಖ ಕಾರಣ ಕೆಲವೇ ತಿಂಗಳಲ್ಲಿ ಅವರ ಪುಟ್ಟ ಕುಟುಂಬಕ್ಕೊಂದು ಪುಟಾಣಿ ಸೇರ್ಪಡೆಗೊಳ್ಳಲಿದೆ. ಅಂದರೆ, ಅವರಿಬ್ಬರೂ ತಂದೆ – ತಾಯಿ ಆಗಲಿದ್ದಾರೆ.
ತಾನು ಗರ್ಭಿಣಿಯಾಗಿದ್ದೇನೆ ಎಂದು ಅಲಿಯಾ ಭಟ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಇದೀಗ ರಣಬೀರ್ ಕಪೂರ್ ಸಹ ಅಲಿಯಾ ಭಟ್ ಜೊತೆಗಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ನನ್ನ ಕುಟುಂಬವನ್ನು ಬೆಳೆಸಬೇಕಿದೆ ಮತ್ತು ಅವರಿಗಾಗಿ (ಕುಟುಂಬಕ್ಕಾಗಿ) ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ನನಗೀಗ ಸಾಕಷ್ಟು ಕೆಲಸ ಮಾಡಬೇಕಿದೆ. ನಾನು ನನ್ನ ಕುಟುಂಬವನ್ನು ನೋಡಿಕೊಳ್ಳಬೇಕಿದೆ. ಅವರಿಗಾಗಿ ಕೆಲಸ ಮಾಡಬೇಕಿದೆ. ಇದಕ್ಕೂ ಮೊದಲು ನಾನು ನನಗಾಗಿ ಕೆಲಸ ಮಾಡುತ್ತಿದ್ದೆ. ಈಗ ಅವರಿಗಾಗಿ ಕೆಲಸ ಮಾಡುತ್ತೇನೆ. ಸಾಕಷ್ಟು ಕೆಲಸ ಮಾಡುವುದಿದೆ ಎಂದು ಹೇಳಿದ್ದಾರೆ.
ನನಗಿದು ಬಹುದೊಡ್ಡ ವರ್ಷವಾಗಿದೆ. ನಾನು ಇದೇ ವರ್ಷ ಮದುವೆಯಾಗಿದ್ದೇನೆ, ಇದೇ ವರ್ಷದಲ್ಲಿ ಸುಂದರವಾದ ಸಮಯವೂ ಬರುತ್ತಿದೆ ಎಂದು ರಣಬೀರ್ ಸಂತಸ ಹಂಚಿಕೊಂಡಿದ್ದಾರೆ. ರಣಬೀರ್ ಮತ್ತು ಅಲಿಯಾ ಭಟ್ 2022 ರ ಏಪ್ರಿಲ್ 14 ರಂದು ವಿವಾಹವಾಗಿದ್ದರು. ಈ ಸಿಹಿ ಸುದ್ದಿಯನ್ನು ನೋಡಿದ ಅಭಿಮಾನಿಗಳು ತಾರಾ ದಂಪತಿಗಳಿಗೆ ಶುಭ ಕೋರಿದ್ದಾರೆ.