alex Certify ಅಲರ್ಜಿ ಅಥವಾ ತುರಿಕೆ ಇದ್ದಾಗ ಮಾಡಬೇಡಿ ಈ ಕೆಲಸ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಲರ್ಜಿ ಅಥವಾ ತುರಿಕೆ ಇದ್ದಾಗ ಮಾಡಬೇಡಿ ಈ ಕೆಲಸ…..!

ಕೆಲವರಿಗೆ ಅಲರ್ಜಿ ಸಮಸ್ಯೆ ಇರುತ್ತದೆ. ಇದ್ದಕ್ಕಿದ್ದಂತೆ ಮೈಯ್ಯೆಲ್ಲಾ ತುರಿಕೆ ಮತ್ತು ಕಿರಿಕಿರಿ ಉಂಟಾಗುತ್ತದೆ. ಇದಕ್ಕೆ ಕಾರಣ ಚರ್ಮದ ಅಲರ್ಜಿ. ಕೆಲವೊಮ್ಮೆ ನಮ್ಮ ದೇಹಕ್ಕೆ ಸರಿಹೊಂದದ ಪದಾರ್ಥಗಳನ್ನು ತಿನ್ನುವುದರಿಂದ ಅಲರ್ಜಿ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವೊಂದು ಆಹಾರ ಪದಾರ್ಥಗಳಿಂದ ನೀವು ದೂರವಿರಬೇಕು. ತಪ್ಪಾದ ಆಹಾರವನ್ನು ಸೇವಿಸುವುದರಿಂದ, ತುರಿಕೆ ಜೊತೆಗೆ, ದದ್ದುಗಳು, ಕಿರಿಕಿರಿ ಮತ್ತು ಊತ ಉಂಟಾಗಬಹುದು. ಈ ಆಹಾರಗಳಲ್ಲಿರುವ ಪೋಷಕಾಂಶಗಳು ತುರಿಕೆಯನ್ನು ಹೆಚ್ಚಿಸಬಹುದು.

ಮೊಟ್ಟೆ: ತುರಿಕೆ ಇದ್ದಾಗ ಮೊಟ್ಟೆಯನ್ನು ತಿನ್ನಬಾರದು. ಮೊಟ್ಟೆ ತುರಿಕೆ ಸಮಸ್ಯೆಯನ್ನು ಹೆಚ್ಚಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಇರುವ ಕಾರಣ, ಚರ್ಮದ ಮೇಲೆ ಪ್ರತಿಕ್ರಿಯೆ ಉಂಟಾಗಬಹುದು ಮತ್ತು ಊತದ ಸಮಸ್ಯೆಯೂ ಆಗುವ ಸಾಧ್ಯತೆ ಇರುತ್ತದೆ. ಅಲರ್ಜಿ ಇರುವಾಗ ಮೊಟ್ಟೆಗಳನ್ನು ತಿನ್ನುವುದರಿಂದ ಉಸಿರಾಟದ ತೊಂದರೆಯೂ ಉಂಟಾಗುತ್ತದೆ.

ಡ್ರೈ ಫ್ರೂಟ್ಸ್‌: ಗೋಡಂಬಿ, ಬಾದಾಮಿ ಮತ್ತು ವಾಲ್‌ನಟ್‌ಗಳನ್ನು ತಿನ್ನುವುದರಿಂದ ಅನೇಕರಿಗೆ ಅಲರ್ಜಿ ಉಂಟಾಗುತ್ತದೆ. ತುರಿಕೆ ಉಂಟಾದಾಗ ಈ ಡ್ರೈ ಫ್ರೂಟ್ಸ್ ನಿಂದ ಮಾಡಿದ ಯಾವುದೇ ತಿನಿಸನ್ನೂ ತಿನ್ನಬಾರದು. ತುರಿಕೆಯನ್ನು ಹೆಚ್ಚಿಸುವುದರ ಜೊತೆಗೆ, ಒಂದು ರೀತಿಯ ಬರ್ನಿಂಗ್‌ ಸೆನ್ಸೇಶನ್‌ ಮತ್ತು ಊತವನ್ನು ಉಂಟುಮಾಡುತ್ತದೆ.

ಮೀನು: ತುರಿಕೆಯಿದ್ದಾಗ ಮೀನು ತಿನ್ನುವುದು ಅಪಾಯಕಾರಿ. ಮೀನು ತಿನ್ನುವುದರಿಂದ ತಲೆನೋವು ಮತ್ತು ವಾಕರಿಕೆ ಉಂಟಾಗುತ್ತದೆ. ಅಲರ್ಜಿಯಿದ್ದಾಗ ಮೀನು ಸೇವನೆ ಮಾಡಿದ್ರೆ ಅತಿಸಾರಕ್ಕೆ ಕಾರಣವಾಗಬಹುದು.

ನೆಲಗಡಲೆ: ಕಡಲೆಕಾಯಿ ಅಥವಾ ಕಡಲೆಕಾಯಿ ಎಣ್ಣೆ ತುರಿಕೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ತುರಿಕೆ ಅಥವಾ ಅಲರ್ಜಿಯ ಸಮಯದಲ್ಲಿ ಕಡಲೆಕಾಯಿಯ ಸೇವನೆಯು ಚರ್ಮದಲ್ಲಿ ಊತವನ್ನು ಉಂಟುಮಾಡಬಹುದು. ಬರ್ನಿಂಗ್‌ ಸೆನ್ಸೇಶನ್‌ ಕೂಡ ಪ್ರಾರಂಭವಾಗುತ್ತದೆ. ಹಾಗಾಗಿ ಅಲರ್ಜಿ ಇದ್ದಾಗ ಶೇಂಗಾ ತಿನ್ನಬೇಡಿ.

ಎಳ್ಳು: ಎಳ್ಳು ಕೂಡ ಕೆಲವರಿಗೆ ಅಲರ್ಜಿಯನ್ನು ಉಂಟುಮಾಡುತ್ತದೆ. ತುರಿಕೆಯಿದ್ದಾಗ ಎಳ್ಳನ್ನು ಸೇವನೆ ಮಾಡಬಾರದು. ಮಾರುಕಟ್ಟೆಯಲ್ಲಿ ಬರುವ ಅನೇಕ ತಿನಿಸುಗಳಲ್ಲಿ  ಎಳ್ಳನ್ನು ಬಳಸುತ್ತಾರೆ. ಹಾಗಾಗಿ ಅವುಗಳಿಂದ್ಲೂ ದೂರವಿರಿ.

ಗೋಧಿ: ಅಲರ್ಜಿ ಅಥವಾ ತುರಿಕೆಯಿದ್ದ ಸಮಯದಲ್ಲಿ ಗೋಧಿ ತಿನ್ನುವುದನ್ನು ತಪ್ಪಿಸಿ. ಗೋಧಿಯಲ್ಲಿ ಗ್ಲುಟನ್ ಇರುತ್ತದೆ. ಇದು ತುರಿಕೆ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಗೋಧಿಯಿಂದ ಮಾಡಿದ ಯಾವುದೇ ಪದಾರ್ಥವನ್ನೂ ತಿನ್ನಬಾರದು.

ಸೋಯಾಬೀನ್: ಅನೇಕರಿಗೆ ಸೋಯಾಬೀನ್‌ ತಿಂದರೆ ಅಲರ್ಜಿ ಉಂಟಾಗುತ್ತದೆ. ಸೋಯಾಬೀನ್ ಕೆಲವರ ದೇಹಕ್ಕೆ ಹೊಂದುವುದಿಲ್ಲ. ಹಾಗಾಗಿ ತುರಿಕೆ ಅಥವಾ ಅಲರ್ಜಿ ಇದ್ದಾಗ ಸೋಯಾಬೀನ್‌ ಅಥವಾ ಅದರಿಂದ ಮಾಡಿದ ಯಾವುದೇ ಪದಾರ್ಥವನ್ನೂ ಸೇವನೆ ಮಾಡಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...