ಮಕ್ಕಳ ತ್ವಚೆ ಬಹಳ ಕೋಮಲವಾಗಿರುವುದರಿಂದ ಧೂಳು, ಇನ್ನಿತರ ಕಾರಣಗಳಿಂದ ಬಹಳ ಬೇಗ ಅರ್ಲಜಿಯಾಗುತ್ತದೆ. ಈ ಸಮಸ್ಯೆಯನ್ನು ದೂರವಾಗಿಸಲು ಈ ಟಿಪ್ ಫಾಲೋ ಮಾಡಿ.
ಮಗುವಿಗೆ ಪ್ರತಿದಿನ ಸ್ನಾನ ಮಾಡಿಸುವ ಮೊದಲು ದೇಹವನ್ನು ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುತ್ತಾರೆ. ಆ ವೇಳೆ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಶುದ್ಧ ಅರಿಶಿನ ಪುಡಿಯನ್ನು ಮಿಕ್ಸ್ ಮಾಡಿ ಅದರಿಂದ ಮಸಾಜ್ ಮಾಡಿ ಸ್ನಾನ ಮಾಡಿಸಿದರೆ ಮಗುವಿನ ತ್ವಚೆ ಸದಾ ಆರೋಗ್ಯವಾಗಿರುತ್ತದೆ. ಯಾವುದೇ ಅಲರ್ಜಿ ಸಮಸ್ಯೆ ಕಾಡುವುದಿಲ್ಲ.
ಮನೆಯಿಂದ ಹೊರ ಹೋಗುವ ಸಂದರ್ಭ ಬಂದಾಗ ಕೈ, ಕಾಲಿಗೆ ತೆಳುವಾಗಿ ತೆಂಗಿನೆಣ್ಣೆ ಹಚ್ಚಿ. ಹೊರಗಿನಿಂದ ಬಂದಾಕ್ಷಣ ಕೈ ಕಾಲು ತೊಳೆಯಿರಿ. ಮಕ್ಕಳಿಗೆ ದಿನಕ್ಕೆರಡು ಬಾರಿ ಸ್ನಾನ ಮಾಡಿಸಿ. ರಾತ್ರಿ ಮಲಗುವ ಮುನ್ನ ತುಸು ಬಿಸಿ ನೀರಿನಲ್ಲಿ ಸ್ನಾನ ಮಾಡಿಸುವುದರಿಂದ ತ್ವಚೆ ಪರಿಶುದ್ಧವಾಗುತ್ತದೆ ಮಾತ್ರವಲ್ಲ ಮಕ್ಕಳು ಚೆನ್ನಾಗಿ ನಿದ್ದೆ ಮಾಡುತ್ತಾರೆ.