ಕೆಲವೊಬ್ಬರಿಗೆ ತಾನು ಸುಂದರವಾಗಿ ಕಾಣಬೇಕು ಅಂತಾ ಆಸೆ ಇರುತ್ತದೆ. ಇದಕ್ಕಾಗಿ ಬ್ಯೂಟಿ ಪಾರ್ಲರ್ ಗಾಗಿ ಒಂದಷ್ಟು ದುಡ್ಡು ಹಾಕ್ತಾರೆ. ಇನ್ನೂ ಕೆಲವರಿಗೆ ಹೇರ್ ಸ್ಟೈಲ್ ಮೇಲೆ ವಿಶೇಷ ಆಸಕ್ತಿ ಇರುತ್ತದೆ. ಆದರೆ, ಇಲ್ಲೊಬ್ಬಾತನ ಆಸಕ್ತಿ ಬಗ್ಗೆ ಕೇಳಿದ್ರೆ ಗಾಬರಿ ಬೀಳ್ತೀರಾ..!
ಹೌದು, ಬ್ರೆಜಿಲ್ ನ ಈ ವ್ಯಕ್ತಿಯೊಬ್ಬನಿಗೆ ತಾನು ದೆವ್ವದಂತೆ ಕಾಣಬೇಕೆಂಬ ಆಸೆಯಂತೆ. ಅದಕ್ಕಾಗಿ ಆತ ತನ್ನನ್ನು ತಾನು ಮಾರ್ಪಾಡು ಮಾಡಿಕೊಂಡಿದ್ದಾನೆ. ಮೈಕೆಲ್ ಫಾರೊ ಪ್ರಡ್ಡೊ ಎಂಬಾತ ವಿಪರೀತ ಮಾರ್ಪಾಡು ವ್ಯಸನಿಯಾಗಿದ್ದಾನೆ. ಆತ ದೆವ್ವದಂತೆ ಕಾಣುವ ಬೃಹತ್ ರೂಪಾಂತರಕ್ಕೆ ಒಳಗಾಗಿದ್ದಾನೆ. ಆತನ ದೇಹದ ಸುಮಾರು ಶೇ. 85 ರಷ್ಟನ್ನು ಶಾಯಿಯಿಂದ ಮುಚ್ಚಲಾಗಿದೆ. ಅವನ ವ್ಯಾಪಕವಾದ ದೇಹದ ಮಾರ್ಪಾಡುಗಳು ಚುಚ್ಚುವಿಕೆ ಮತ್ತು ಹರಿತವಾದ ಹಲ್ಲುಗಳನ್ನು ಸಹ ಒಳಗೊಂಡಿವೆ.
ಮೈಕೆಲ್ ನ ಕಿವಿಗಳನ್ನು ತೆಗೆದುಹಾಕಲಾಗಿದೆ. ಅದಕ್ಕೂ ಮುನ್ನ ಆತ ತನ್ನ ಹಣೆಯಲ್ಲಿ ಹಣೆಯಲ್ಲಿ ಕೊಂಬುಗಳನ್ನು ಅಳವಡಿಸಿದ್ದನು. ಅವನ ಮೂಗಿನ ಭಾಗವನ್ನು ವಿಚಿತ್ರಾಕಾರವಾಗಿ ಮಾಡಲಾಗಿದೆ. ತನ್ನ ದೆವ್ವದಾಕೃತಿಯ ಫೋಟೋವನ್ನು ಮೈಕೆಲ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾನೆ.