ಋಗ್ವೇದ ಸೇರಿದಂತೆ ಅನೇಕ ಪುರಾಣಗಳಲ್ಲಿ ನೀರಿನ ಬಳಕೆ ಬಗ್ಗೆ ವಿವರವಾಗಿ ಹೇಳಲಾಗಿದೆ. ಈ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು ಕುಡಿದ್ರೆ, ಅನಗತ್ಯವಾಗಿ ನೀರು ಚೆಲ್ಲಿದ್ರೆ ಪಾಪ ಸುತ್ತಿಕೊಳ್ಳುತ್ತದೆ.
ನೀರಿಗೆ ಅವಮಾನ ಮಾಡಿದ್ರೆ ಜಾತಕದಲ್ಲಿ ಚಂದ್ರ ಕೆಟ್ಟ ಫಲ ನೀಡ್ತಾನೆ. ಇದ್ರಿಂದ ಅನೇಕ ರೋಗಗಳು ಕಾಡುತ್ತವೆ. ಮನಸ್ಸು ಹಾಗೂ ಕಫಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ನೀರನ್ನು ಎಚ್ಚರಿಕೆಯಿಂದ ಬಳಸಬೇಕು.
ಮಹಾಭಾರತದಲ್ಲಿ ನೀರಿನ ಮಹತ್ವವನ್ನು ಹೇಳಲಾಗಿದೆ. ಋಗ್ವೇದದಲ್ಲಿಯೂ ಜಲ ದೇವ ವರುಣನ ಪ್ರಸ್ತಾಪವಿದೆ. ಈ ಎರಡೂ ಗ್ರಂಥಗಳ ಪ್ರಕಾರ ನೀರನ್ನು ಅನಗತ್ಯವಾಗಿ ಹಾಳು ಮಾಡಬಾರದು. ಚಂದ್ರ ಹಾಗೂ ನೀರಿನ ದೋಷ ತಟ್ಟುತ್ತದೆ. ಇದ್ರಿಂದ ನೀರಿನ ಕೊರತೆ ಜೊತೆ ಕೆಲ ರೋಗಗಳು ಕಾಡುತ್ತವೆ. ಒತ್ತಡ, ಭಯ, ಹುಚ್ಚು ಉಂಟಾಗುತ್ತದೆ.
ಕೆಲವರು ನಿಂತು ನೀರನ್ನು ಕುಡಿಯುತ್ತಾರೆ. ಸ್ಕಂದ ಹಾಗೂ ಬ್ರಹ್ಮ ಪುರಾಣದ ಪ್ರಕಾರ ನಿಂತು ನೀರನ್ನು ಕುಡಿಯಬಾರದು. ನಿಂತು ನೀರು ಕುಡಿದ್ರೆ ಸೊಂಟದ ಕೆಳಗಿನ ರೋಗಗಳು ಕಾಡುತ್ತವೆ.
ಒಮ್ಮೆ ಕುಡಿದು ಬಿಟ್ಟ ನೀರು ಅಶುದ್ಧ. ಬಾಟಲಿ ಅಥವಾ ಲೋಟದಲ್ಲಿ ಎಷ್ಟು ನೀರಿದ್ಯೋ ಅದನ್ನು ಒಂದೇ ಬಾರಿ ಕುಡಿಯಬೇಕು. ಬಿಟ್ಟ ನೀರನ್ನು ಬೇರೆಯವರು ಕುಡಿದ್ರೆ ನೀಡಿದ ಹಾಗೂ ಕುಡಿದ ವ್ಯಕ್ತಿಗಳಿಗಿಬ್ಬರಿಗೂ ದೋಷ ತಟ್ಟಲಿದೆ. ಮಾನಸಿಕ ರೋಗ ಕಾಡುವ ಸಾಧ್ಯತೆಯಿರುತ್ತದೆ.
ಎಡಗೈನಲ್ಲಿ ನೀರನ್ನು ಕುಡಿಯಬಾರದು. ಈ ರೀತಿ ಕುಡಿದ ನೀರು ಮದ್ಯಕ್ಕೆ ಸಮ.