ಅರ್ಚನಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಕೊಲೆಯಾದ ಅರ್ಚನಾಳ, ಎರಡನೇ ಪತಿ ನವೀನ್ ಹಾಗೂ ಅನೂಪ್ ಎನ್ನುವನನ್ನ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ.
ಮೊದಲನೆ ಗಂಡನಿಂದ ಡೈವೋರ್ಸ್ ಪಡೆದು, ನವೀನ್ ನನ್ನು ಎರಡನೇ ಮದುವೆಯಾಗಿದ್ದ ಅರ್ಚನಾ ಅವನಿಂದಲೇ ಕೊಲೆಯಾಗಿದ್ದಾಳೆ. ಕಳೆದ ನಾಲ್ಕೈದು ವರ್ಷಗಳಿಂದ ಜೊತೆಗೆ ವಾಸವಾಗಿದ್ದ ಅರ್ಚನಾ ಹಾಗೂ ನವೀನ್ ನಡುವೆ ಆಸ್ತಿ ವಿಚಾರಕ್ಕೆ ಪದೇ ಪದೇ ಗಲಾಟೆ ನಡೆಯುತ್ತಿತ್ತು.
ಅಲ್ಲದೇ ಆಸ್ತಿ ವಿಚಾರಕ್ಕೆ ತಾಯಿಯೊಂದಿಗೆ ಜಗಳವಾಡಿಕೊಂಡು ಅರ್ಚನಾಳ ಮಗಳು ಆಕೆಯಿಂದ ದೂರವಾಗಿದ್ದಳು. ಇತ್ತ ಅರ್ಚನಾಳನ್ನು ಮದುವೆಯಾಗಿದ್ದ ನವೀನ್ ಗೆ ಅವಳ ಮಗಳೊಂದಿಗೂ ಸಂಬಂಧವಿತ್ತು ಎನ್ನಲಾಗಿದೆ. ಇತ್ತೀಚೆಗೆ ನವೀನ್ ಹಾಗೂ ಕೊಲೆಯಾದ ಅರ್ಚನಾಳ ಮಗಳು ಒಟ್ಟಿಗೆ ನೆಲೆಸಿದ್ದರು, ಈ ವಿಚಾರವಾಗಿ ಹಲವು ಬಾರಿ ನವೀನ್ ಹಾಗೂ ಅರ್ಚನಾಳ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
BIG NEWS: ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ – ಅರುಣ್ ಸಿಂಗ್ ಸ್ಪಷ್ಟನೆ
ಡಿಸೆಂಬರ್ 27ರ ರಾತ್ರಿ ಜಿಗಣಿಯಿಂದ ಬೆಳ್ಳಂದೂರು ಕಡೆ ಹೊರಟಿದ್ದ ಅರ್ಚನಾ ರೆಡ್ಡಿಯನ್ನ, ಹೊಸೂರು ರಸ್ತೆಯ ಹೊಸರೋಡ್ ಜಂಕ್ಷನ್ ಬಳಿ ಅಟ್ಯಾಕ್ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಧ್ಯ ಆಸ್ತಿ ವಿಚಾರಕ್ಕೆ ಹತ್ಯೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು, ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.