ಮಲೈಕಾ ಅರೋರಾ ಮತ್ತು ಅಮೃತಾ ಅರೋರಾ ಬಿಟೌನ್‌ನಲ್ಲಿ ಸಾಕಷ್ಟು ಹೆಸರು ಮಾಡಿರೋ ಸೋದರಿಯರು. ಪ್ರತಿ ಬಾರಿ ತಮ್ಮ ಬೆಸ್ಟ್ ಫ್ರೆಂಡ್ಸ್ ಜೊತೆ ಔಟಿಂಗ್, ಡಿನ್ನರ್, ಲಂಚ್ ಅಂತೆಲ್ಲಾ ಹೊರಗೆ ಹೊರಟರೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿರ್ತಾರೆ.
ಇದೀಗ ‘ಅರೋರಾ ಸಿಸ್ಟರ್ಸ್’ ಎಂಬ ಹೊಸ ಕಾರ್ಯಕ್ರಮವೊಂದನ್ನು ಮಲೈಕಾ ಹಾಗೂ ಅಮೃತಾ ನಡೆಸಿಕೊಡ್ತಿದ್ದಾರಂತೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಈ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾರ ಹಾಲಿ ಪ್ರಿಯಕರ ಅರ್ಜುನ್ ಕಪೂರ್ ಹಾಗೂ ಮಾಜಿ ಪತಿ ಅರ್ಬಾಜ್ ಖಾನ್ ಇಬ್ಬರೂ ಕಾಣಿಸಿಕೊಳ್ತಿದ್ದಾರಂತೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಅರ್ಬಾಜ್ ಹಾಗೂ ಅರ್ಜುನ್ ಇಬ್ಬರೂ ವಿಭಿನ್ನ ಸಂಚಿಕೆಗಳಲ್ಲಿ ಬಾಗಿಯಾಗಲಿದ್ದಾರಂತೆ. ಅರ್ಬಾಜ್ ಮತ್ತು ಮಲೈಕಾ ಅರೋರಾ ಈಗಾಗ್ಲೇ ವಿಚ್ಛೇದನ ಪಡೆದಿದ್ದಾರೆ. ಆದ್ರೆ ಮಗ ಅರ್ಹಾನ್ ಜೊತೆಗೆ ಆಗಾಗ ಒಟ್ಟಿಗೆ ಕಾಣಿಸಿಕೊಳ್ತಾನೇ ಇರ್ತಾರೆ. ಹಾಗಾಗಿ ಇಬ್ಬರ ಮಧ್ಯೆ ದ್ವೇಷವಿಲ್ಲ ಅನ್ನೋದಂತೂ ಖಚಿತವಾಗಿದೆ.
ಮಲೈಕಾ ಹಾಗೂ ಅಮೃತಾ ನಡೆಸಿಕೊಡುವ ಈ ಕಾರ್ಯಕ್ರಮವು ಅವರ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರನ್ನು ಒಳಗೊಂಡಿರುತ್ತದೆ. ಪ್ರೀತಿ, ಮದುವೆ, ವಿಚ್ಛೇದನ ಹೀಗೆ ಅನೇಕ ವಿಷಯಗಳು ಕಾರ್ಯಕ್ರಮದಲ್ಲಿ ಹೇಗೆ ತೆರೆದುಕೊಳ್ಳುತ್ತವೆ ಎಂಬುದು ಆಸಕ್ತಿದಾಯಕವಾಗಿದೆ.
ಮಲೈಕಾ ಮತ್ತು ಅರ್ಜುನ್ ಕಪೂರ್ ಬಹಳ ಸಮಯದಿಂದ ಡೇಟಿಂಗ್ ನಡೆಸ್ತಿರೋದು ಎಲ್ಲರಿಗೂ ತಿಳಿದಿದೆ. ಇಬ್ಬರೂ ಜೊತೆಯಾಗಿ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದಾರೆ.
ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಭಾಗಿಯಾಗಿದ್ದ ಅರ್ಜುನ್, ಮಲೈಕಾ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸದ್ಯ ಇಬ್ಬರೂ ಕೆಲಸದಲ್ಲಿ ಬ್ಯುಸಿಯಾಗಿರೋದ್ರಿಂದ ಮದುವೆ ಸದ್ಯಕ್ಕಿಲ್ಲ ಅಂತಾನೂ ಹೇಳಿದ್ದಾರೆ. ಅರೋರಾ ಸಿಸ್ಟರ್ಸ್ ಕಾರ್ಯಕ್ರಮದಲ್ಲಿ ಯಾವೆಲ್ಲಾ ಸೀಕ್ರೆಟ್‌ಗಳನ್ನು ರಿವೀಲ್ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕು.