![](https://kannadadunia.com/wp-content/uploads/2023/02/main-qimg-430b5693f78542cd767f7fcbacaa5100-lq.jpg)
ಅರೆಂಜ್ ಮ್ಯಾರೇಜ್ ಮನೆಯವರ ಒಪ್ಪಿಗೆ ಮೇಲೆ ಆಗಿರುತ್ತದೆ. ಮದುವೆ ಕೆಲಸದಲ್ಲಿ ದಂಪತಿ ಸುಸ್ತಾಗಿರುತ್ತಾರೆ. ಹಾಸಿಗೆ ಮೇಲೆ ತಲೆಯಿಟ್ಟರೆ ಸಾಕು ಎನ್ನುವಂತಾಗಿರುತ್ತದೆ. ಆದ್ರೆ ಸಂಬಂಧಿಕರು ಈ ಸಂದರ್ಭವನ್ನು ಬಿಡುವುದಿಲ್ಲ. ನವ ದಂಪತಿಗೆ ಕಾಟ ಕೊಡ್ತಾರೆ. ಹಾಸ್ಯ ಮಾಡ್ತಾರೆ. ಇದು ನಿಮ್ಮನ್ನು ಮುಜುಗರಕ್ಕೆ ತಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕೆ ಮೊದಲೇ ಸಿದ್ಧವಾಗಿರಬೇಕಾಗುತ್ತದೆ.
ಸಿನಿಮಾಗಳಲ್ಲಿ ತೋರಿಸುವಂತೆ ಕೆಲವರು ಮೊದಲ ರಾತ್ರಿಯ ರೂಮನ್ನು ಸಿಂಗಾರ ಮಾಡ್ತಾರೆ. ಇಷ್ಟವಿರಲಿ ಬಿಡಲಿ ಗುಲಾಬಿ ಸೇರಿದಂತೆ ಬಣ್ಣ ಬಣ್ಣದ ಹೂ ಹಾಗೂ ಉಡುಗೊರೆಗಳು ರೂಮಿನಲ್ಲಿರುತ್ತವೆ. ಉಡುಗೊರೆಯಲ್ಲಿ ಕಾಂಡೋಮ್ ಸಿಕ್ಕಿದ್ರೂ ಆಶ್ಚರ್ಯವಿಲ್ಲ. ಹಾಗಂತ ಇದಕ್ಕೆ ನೀವು ದಂಗಾಗುವ ಅವಶ್ಯಕತೆಯಿಲ್ಲ.
ಅರೆಂಜ್ ಮ್ಯಾರೇಜ್ ನಲ್ಲಿ ಇಬ್ಬರ ಬಗ್ಗೆಯೂ ಅಷ್ಟಾಗಿ ತಿಳಿದಿರೋದಿಲ್ಲ. ಒಂದು ರೀತಿಯಲ್ಲಿ ಅಪರಿಚಿತರು ಎಂದ್ರೆ ತಪ್ಪಾಗಲಾರದು. ಮದುವೆ, ಮದುವೆ ಖರ್ಚು, ಬಟ್ಟೆ ಎಲ್ಲದರ ಬಗ್ಗೆಯೂ ಚಿಂತನೆ ನಡೆಸುವ ಜೋಡಿ ಮೊದಲ ರಾತ್ರಿ ಬಗ್ಗೆಯೂ ಯೋಚನೆ ಮಾಡ್ತಾರೆ. ಆಗ ಗೊತ್ತಿಲ್ಲದೆ ಒಂದು ಭಯ ಶುರುವಾಗುತ್ತದೆ. ಅಪರಿಚಿತರ ಜೊತೆ ರಾತ್ರಿ ಕಳೆಯುವುದು ಸುಲಭದ ಮಾತಲ್ಲ. ಹಾಗಂತ ಹೆದ್ರಬೇಕಾಗಿಲ್ಲ. ಇಬ್ಬರೂ ಒಟ್ಟಿಗೆ ಜೀವನ ನಡೆಸಬೇಕು. ಹಾಗಾಗಿ ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ಮೊದಲ ರಾತ್ರಿಗಿಂತ ಬೆಳಿಗ್ಗೆ ಮತ್ತಷ್ಟು ತಮಾಷೆ ಮಾತುಗಳು ಕೇಳಿ ಬರುತ್ತವೆ. ಕೆಲವರು ತಮಾಷೆ ಮಾಡಿದ್ರೆ ಮತ್ತೆ ಕೆಲವರು ಕುಟುಂಬ ಯೋಜನೆ ಬಗ್ಗೆ ಮಾತನಾಡ್ತಾರೆ. ಎಲ್ಲರ ಮುಂದೆ ಈ ಮಾತುಗಳು ದಂಪತಿ ಮುಜುಗರಕ್ಕೆ ಕಾರಣವಾಗುತ್ತದೆ. ಅರೆಂಜ್ ಮ್ಯಾರೇಜ್ ಆಗುವವರು ಇದೆಲ್ಲದಕ್ಕೂ ಸಿದ್ಧವಾಗಿರಬೇಕಾಗುತ್ತದೆ.