ಅರಿಶಿನ ಮತ್ತು ಕರಿಮೆಣಸು ಆಯುರ್ವೇದ ಔಷಧ ಪದ್ದತಿಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಇದರಲ್ಲಿ ಇರುವ ರೋಗ ನಿರೋಧಕ ಶಕ್ತಿಯಿಂದ ಅನೇಕ ಕಾಯಿಲೆಗಳನ್ನು ಗುಣಪಡಿಸಿಕೊಳ್ಳಬಹುದು.
ಚಿಕ್ಕ ಪುಟ್ಟ ನೆಗಡಿ, ಕೆಮ್ಮು, ಉರಿಯೂತ, ಗ್ಯಾಸ್, ತ್ವಚೆಯ ಆರೈಕೆಗೂ ಇವುಗಳನ್ನು ಬಳಸಬಹುದು. ಕಾಳುಮೆಣಸಿನಲ್ಲಿ ಇರುವ ಪೈಪರಿನ್ ಮತ್ತು ಪೈಪರೆಸ್ ಮತ್ತು ಅರಿಶಿನದ ಒಳಗೆ ಇರುವ ರಾಸಾಯನಿಕ ಸಂಯುಕ್ತ ಸೇರಿದಾಗ ಅದ್ಭುತವಾದಂತಹ ಶಕ್ತಿ ಬಿಡುಗಡೆಯಾಗುತ್ತದೆ.
ಇವೆರಡು ಆಹಾರಕ್ಕೆ ಅದ್ಭುತ ರುಚಿಯನ್ನು ನೀಡುತ್ತವೆ. ಅರಿಶಿನದಿಂದ ಆಹಾರವು ವೇಗವಾಗಿ ಜೀರ್ಣವಾಗುತ್ತದೆ. ಅರಿಶಿನದ ಜೊತೆಗೆ ಕಾಳು ಮೆಣಸನ್ನು ಸೇರಿಸಿದಾಗ ನಿರೋಟ್ಯಾಕ್ಸಿನ್ಸ್ ಮತ್ತು ತ್ರಿನೈಟ್ರೋಪಾಪಿಯಾನಿಕ್ ಆಮ್ಲ ಉತ್ಪತ್ತಿ ಆಗುತ್ತದೆ.
ಇವು ನರಗಳ ಮೇಲೆ ಉಂಟಾಗುವ ಹಾನಿಕಾರಕ ಜೀವಾಣುಗಳನ್ನು ತೆಗೆದು ಹಾಕುತ್ತದೆ. ಅದರಲ್ಲಿ ಇರುವ ಖನಿಜ ಮತ್ತು ಕ್ಯಾಲ್ಸಿಯಂಗಳು ರಕ್ತಕ್ಕೆ ಸೇರಿಕೊಳ್ಳುತ್ತದೆ.
ಇದರಿಂದ ಆಸ್ಪಿಯೋ ಪೋರಿಸಿಸ್ ನಂತಹ ಸಮಸ್ಯೆಗಳು ಉಂಟಾಗುತ್ತವೆ. ಕೆಲವೊಂದು ಅಧ್ಯಯನಗಳ ಪ್ರಕಾರ ಮೆಣಸಿನಕಾಳು ಮಿಶ್ರಿತ ಅರಿಶಿನ ಬಳಕೆಯಿಂದ ಮೂಳೆ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತದೆ.