ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಬಲ್ಲ ಅನೇಕ ಉಪಾಯಗಳು ವಾಸ್ತುಶಾಸ್ತ್ರದಲ್ಲಿವೆ. ಇವು ನಮ್ಮ ಭವಿಷ್ಯವನ್ನೇ ಬದಲಿಸಬಲ್ಲವು. ಇಂತಹ ಅನೇಕ ವಿಷಯಗಳನ್ನು ಜ್ಯೋತಿಷ್ಯದಲ್ಲಿ ಸಹ ಉಲ್ಲೇಖಿಸಲಾಗಿದೆ.
ಅಡುಗೆ ಮನೆಯಲ್ಲಿ ನಾವು ಬಳಸುವ ಮ್ಯಾಜಿಕ್ ಮಸಾಲೆಯೊಂದು ನಮ್ಮ ಅದೃಷ್ಟವನ್ನು ಸಹ ಬದಲಿಸಬಲ್ಲದು. ಅರಿಶಿನಕ್ಕೆ ವಾಸ್ತುಶಾಸ್ತ್ರದಲ್ಲಿ ಬಹಳ ಮಹತ್ವವಿದೆ. ಅರಿಶಿನವನ್ನು ಮಂಗಳಕರ ಮತ್ತು ಶುಭ ಉದ್ದೇಶಗಳಲ್ಲಿ ಬಳಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅರಿಶಿನದ ಉಂಡೆಯನ್ನು ತಿಜೋರಿಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ತಿಜೋರಿಯಲ್ಲಿ ಅರಿಶಿನದ ಉಂಡೆಯನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಇಡಬೇಕು. ಇದರಿಂದ ತಿಜೋರಿಯಲ್ಲಿ ಯಾವತ್ತೂ ಹಣದ ಕೊರತೆಯಾಗುವುದಿಲ್ಲ. ವ್ಯರ್ಥ ಖರ್ಚು ಕೂಡ ನಿಯಂತ್ರಣಕ್ಕೆ ಬರುತ್ತದೆ.
ಅರಿಶಿನವನ್ನು ಸೇಫ್‌ನಲ್ಲಿ ಇರಿಸುವಾಗ ಈಶಾನ್ಯ ಮೂಲೆಯಲ್ಲಿಡಬೇಕು. ಈ ದಿಕ್ಕಿನಲ್ಲಿ ಇಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.
ಅರಿಶಿನದ ಉಂಡೆಯನ್ನು ಸುರಕ್ಷಿತವಾಗಿಟ್ಟರೆ ಕಳ್ಳತನದ ಸಾಧ್ಯತೆ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ. ಅರಿಶಿನವು ಸುತ್ತಲೂ ಸಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಅಮೂಲ್ಯ ವಸ್ತುಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.
ಭತ್ತದ ಕಾಳುಗಳೊಂದಿಗೆ ಅರಿಶಿನದ ಉಂಡೆಯನ್ನು ತಿಜೋರಿಯಲ್ಲಿಟ್ಟರೆ ಕಳೆದು ಹೋದ ಹಣ ವಾಪಸ್ ಸಿಗುತ್ತದೆ ಎಂಭ ನಂಬಿಕೆ ಇದೆ. ಕೊಟ್ಟ ಸಾಲ ವಾಪಸ್ ಸಿಗದೇ ಕಂಗಾಲಾಗಿದ್ದರೆ ಈ ಉಪಾಯವನ್ನು ಮಾಡಬೇಕು.
ಗಣೇಶ ಚತುರ್ಥಿಯ ಸಮಯದಲ್ಲಿ ಅರಿಶಿನದ 11 ಗಂಟುಗಳ ಮಾಲೆಯನ್ನು ಮಾಡಿ ಅದನ್ನು ಗಣೇಶನಿಗೆ ಅರ್ಪಿಸಬೇಕು. ಇದು ಖಂಡಿತವಾಗಿಯೂ ಯಶಸ್ಸನ್ನು ತರುತ್ತದೆ.