ಅರಶಿನದ ಬಳಕೆಯಿಂದ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕಿಂತ ಹೆಚ್ಚಿನ ತೊಂದರೆಗಳಿವೆ ಎಂಬುದು ನಿಮಗೆ ನೆನಪಿರಲಿ.
ಕೊರೊನಾ ಕಾಯಿಲೆ ಬಂದ ಬಳಿಕ ಪ್ರತಿಯೊಬ್ಬರೂ ಮನೆಯಲ್ಲಿ ಅರಶಿನ ಬಳಸಿದ ಕಷಾಯ ತಯಾರಿಸುವುದು ಹೆಚ್ಚಾಗಿದೆ. ಆದರೆ ಇದರ ಬಳಕೆ ಇತಿಮಿತಿಯಲ್ಲಿರಬೇಕು ಎಂಬುದನ್ನು ಮರೆಯದಿರಿ.
ಅರಶಿನ ಹೆಚ್ಚು ಸೇವಿಸುವುದರಿಂದ ಲಿವರ್ ಮೇಲೆ ನೇರವಾದ ಪರಿಣಾಮಗಳು ಬಿದ್ದು ಬ್ಲೀಡಿಂಗ್ ನಂಥ ಸಮಸ್ಯೆಯೂ ಕಂಡು ಬರಬಹುದು. ಹಾಗಾಗಿ ಕಷಾಯಕ್ಕೆ ಚಿಟಿಕೆ ಅರಶಿನ ಬಳಸಿದರೆ ಸಾಕು.
ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಕುಡಿಯಲು ಹಾಲು ಕುಡಿಯಲು ಕೊಡುವ ವೇಳೆ ಶೀತ ಕಫ ಆಗದಂತೆ ಅರಶಿನ ಸೇರಿಸುವಾಗಲೂ ಅಷ್ಟೇ, ಚಿಟಿಕೆಗಿಂತ ಹೆಚ್ಚು ಬಳಸದಿರಿ. ಇದರಿಂದ ಮಕ್ಕಳಲ್ಲೂ ಆರೋಗ್ಯದ ಸಮಸ್ಯೆಗಳು ಕಂಡು ಬಂದೀತು.
ಅರಶಿನದಂತೆ ಮೆಂತೆ, ಅಲೋವೇರಾ ಜ್ಯೂಸನ್ನು ವಿಪರೀತ ಸೇವಿಸುವುದರಿಂದ ಹಲವು ಆರೋಗ್ಯದ ಸಮಸ್ಯೆಗಳು ಕಂಡು ಬರಬಹುದು. ಅರಶಿನದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದೆ ಎಂಬುದೇನೋ ನಿಜ, ಹಾಗೆಂದು ಅದನ್ನು ನಿಯಮಿತ ಪ್ರಮಾಣದಲ್ಲಷ್ಟೇ ಸೇವಿಸಬೇಕು, ಬಳಕೆ ಹೆಚ್ಚಿದರೆ ಆರೋಗ್ಯ ಹಾನಿಯಾಗುವುದು ನಿಶ್ಚಿತ.