ಗ್ರಹ ದೋಷದಿಂದ ಬಳಲುತ್ತಿರುವವರು ನವಗ್ರಹಗಳ ಪೂಜೆ, ಶಾಂತಿ, ಹೋಮ, ದಾನ ಮೊದಲಾದವುಗಳನ್ನು ಮಾಡ್ತಾರೆ. ಶುಭ ಗ್ರಹಗಳಾದ ಗುರು ಹಾಗೂ ಶುಕ್ರ ಗ್ರಹಗಳು ಯಾವಾಗ್ಲೂ ಶುಭ ಫಲವನ್ನು ನೀಡುವುದಿಲ್ಲ. ಶನಿ, ಕುಜ, ಕೇತುಗಳಂತೆ ಕೆಲವೊಮ್ಮೆ ಗುರು, ಶುಕ್ರ ಗ್ರಹಗಳ ದೋಷವೂ ಮನುಷ್ಯನನ್ನು ಕಾಡುತ್ತದೆ. ಇಲ್ಲ ಗ್ರಹಗಳು ಅನುಕೂಲಕರವಾಗಿರಬೇಕೆಂದಾದಲ್ಲಿ ನವಗ್ರಹಗಳ ಪೂಜೆ ಬಹಳ ಮಹತ್ವ ಪಡೆಯುತ್ತದೆ.
ಎಲ್ಲ ಒಂಭತ್ತು ಗ್ರಹಗಳು ನಮ್ಮನ್ನು ಒಮ್ಮೆಲೇ ಕಾಡುವುದಿಲ್ಲ. ಒಂದು ಗ್ರಹ ಕಾಡಿದ್ರೂ ನವಗ್ರಹಕ್ಕೆ ಪೂಜೆ ಮಾಡಬೇಕು. ಯಾವ ಗ್ರಹ ಅನುಕೂಲಕರವಾಗಿದೆಯೋ ಆ ಗ್ರಹಕ್ಕೆ ಹೆಚ್ಚಿನ ಪೂಜೆ ಮಾಡಿದಲ್ಲಿ ಉಳಿದ ಗ್ರಹಗಳು ಅನುಕೂಲಕರವಾಗುತ್ತವೆ. ವ್ಯಕ್ತಿಯ ಆರೋಗ್ಯ, ಯಶಸ್ಸು, ಮಾನ-ಸನ್ಮಾನ, ಧನ-ಸಂಪತ್ತು ಎಲ್ಲವೂ ಗ್ರಹ ದೋಷವನ್ನು ಅವಲಂಬಿಸಿದೆ.
ಯಾವ ದಿನ ಯಾವ ಗ್ರಹ ಪೂಜೆ ಮಾಡಬೇಕೆಂದು ಯಂತ್ರ ಗ್ರಂಥದಲ್ಲಿ ವಿವರವಾಗಿ ಹೇಳಲಾಗಿದೆ. ಅದ್ರ ಪ್ರಕಾರ ಭಾನುವಾರ ಸೂರ್ಯನ ಪ್ರಭಾವವಿರುವುದರಿಂದ ಸೂರ್ಯನಿಗೆ ಅಗ್ರಪೂಜೆ ಮಾಡಬೇಕು.
ಸೋಮವಾರ ಚಂದ್ರನಿಗೆ ಸಂಬಂಧಪಟ್ಟಿದ್ದು. ಚಂದ್ರನಿಗೆ ಸೋಮವಾರ ವಿಶೇಷ ಪೂಜೆ ಮಾಡಬೇಕು.
ಕುಜನ ಆರಾಧನೆಯನ್ನು ಮಂಗಳವಾರ ಮಾಡಬೇಕು. ವಸ್ತು, ವಾಹನ, ಸಂಪತ್ತು ಕುಜನ ಪ್ರಭಾವಕ್ಕೆ ಬರುವುದರಿಂದ ಅದ್ರ ಅಡಚಣೆಯಾದಲ್ಲಿ ಕುಜನ ಆರಾದನೆ ಮಾಡಬೇಕು.
ಬುಧವಾರ ಭೌತಿಕ ಸುಖ, ಆರೋಗ್ಯ, ಸ್ನೇಹಕ್ಕಾಗಿ, ಗುರುವಾರ ಆರ್ಥಿಕ ಸ್ಥಿತಿ, ಉನ್ನತ ವ್ಯಾಸಂಗ, ಪದವಿ, ಆಧ್ಯಾತ್ಮಿಕಕ್ಕಾಗಿ ಹಾಗೂ ಶುಕ್ರವಾರ ಕುಟುಂಬ ಶಾಂತಿ, ವೈಭವ, ಗೃಹ ಶಾಂತಿಗಾಗಿ, ನವಗ್ರಹ ಪೂಜೆ ಮಾಡಬೇಕು.
ಕಳ್ಳರ ಭಯ, ಮಂದಸ್ಥಿತಿ, ಹಳೆ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿರುವವರು ಶನಿವಾರ ನವಗ್ರಹ ಆರಾದನೆ ಮಾಡಬೇಕು.