ಸನಾತನ ಧರ್ಮದಲ್ಲಿ ಅರಳಿ ಮರವನ್ನು ದೇವರಂತೆ ಪೂಜಿಸಲಾಗುತ್ತದೆ. ಅರಳಿ ಮರವನ್ನು ಹೇಗೆ ಪೂಜೆ ಮಾಡಬೇಕೆನ್ನುವ ಬಗ್ಗೆ ಗ್ರಂಥದಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ಅರಳಿ ಮರವನ್ನು ಕಲಿಯುಗದ ಕಲ್ಪವೃಕ್ಷ ಎಂದೇ ಕರೆಯಲಾಗುತ್ತದೆ. ಅರಳಿ ಮರದಲ್ಲಿ ದೇವಾನುದೇವತೆಗಳ ಜೊತೆಗೆ ಪೂರ್ವಜರು ಕೂಡ ವಾಸ ಮಾಡ್ತಾರೆಂದು ನಂಬಲಾಗಿದೆ.
ದೇವರೆಂದು ಪೂಜೆ ಮಾಡುವ ಅರಳಿ ಮರದ ಬಗ್ಗೆ ತಿಳಿಯಬೇಕಾಗಿರುವುದು ಸಾಕಷ್ಟಿದೆ. ಶನಿವಾರ ಅರಳಿ ಮರದಲ್ಲಿ ಲಕ್ಷ್ಮಿ ವಾಸವಾಗಿರ್ತಾಳೆಂಬ ನಂಬಿಕೆ ಇದೆ. ಈ ದಿನ ಅರಳಿ ಮರಕ್ಕೆ ನೀರು ಹಾಕುವುದು ಶುಭ. ಆದ್ರೆ ಭಾನುವಾರ ಅರಳಿ ಮರಕ್ಕೆ ನೀರು ಹಾಕುವುದು ನಿಷಿದ್ಧ. ಭಾನುವಾರ ಅರಳಿ ಮರಕ್ಕೆ ನೀರು ಹಾಕಿದ್ರೆ ಬಡತನ ಆವರಿಸಲಿದೆ ಎಂದು ನಂಬಲಾಗಿದೆ. ಪಿತೃಗಳಿಗೆ ಇದ್ರಿಂದ ತೊಂದರೆಯಾಗುವ ಜೊತೆಗೆ ವಂಶಾಭಿವೃದ್ಧಿ ಕಷ್ಟವಾಗುತ್ತದೆ.
ಭಕ್ತರು ಬ್ರಹ್ಮಮಹೂರ್ತದಲ್ಲಿ ದೇವಸ್ಥಾನಕ್ಕೆ ಹೋಗ್ತಾರೆ. ಇದು ಶುಭಕಾರಕ. ಆದ್ರೆ ದೇವಸ್ಥಾನಕ್ಕೆ ಹೋದ ನಂತ್ರ ಅರಳಿ ಮರಕ್ಕೆ ನೀರನ್ನು ಹಾಕಬೇಡಿ. ಈ ವೇಳೆ ಅಲಕ್ಷ್ಮಿ ಅರಳಿ ಮರದಲ್ಲಿ ವಾಸವಾಗಿರುತ್ತಾಳೆ. ಸೂರ್ಯೋದಯದ ನಂತ್ರವೇ ಅರಳಿ ಮರಕ್ಕೆ ಪೂಜೆ ಮಾಡಿ. ಇದ್ರಿಂದ ಮಹಾಲಕ್ಷ್ಮಿ ಪ್ರಸನ್ನಳಾಗಿ ಸದಾ ನಿಮ್ಮ ಬಳಿ ನೆಲೆಸಿರುತ್ತಾಳೆ.
ಗ್ರಂಥದಲ್ಲಿರುವಂತೆ ಪ್ರತಿದಿನ ಅರಳಿ ಮರಕ್ಕೆ ಪೂಜೆ ಮಾಡಿ ಭಕ್ತಿಯಿಂದ ನಮಸ್ಕರಿಸುವುದರಿಂದ ಸಂಪತ್ತು, ಧನ, ದಾನ್ಯ, ಐಶ್ವರ್ಯ, ಸಂತಾನ ಸುಖ, ಸೌಭಾಗ್ಯ ಸೇರಿದಂತೆ ಎಲ್ಲ ಸುಖ-ಶಾಂತಿ ಪ್ರಾಪ್ತಿಯಾಗುತ್ತದೆ. ಆದ್ರೆ ನಿಯಮ ಮೀರಿ ಸೂಕ್ತವಲ್ಲದ ಸಮಯದಲ್ಲಿ ಪೂಜೆ, ನೀರು ಹಾಕುವ ಕೆಲಸ ಮಾಡಿದ್ರೆ ಆಪತ್ತು ಬರುತ್ತದೆ.