ಟಿಪ್ಪು ಸುಲ್ತಾನ್ ಕುರಿತು ಮೈಸೂರು ಸಂಸದ ಪ್ರತಾಪ್ ಸಿಂಹ ಅವಹೇಳನಾಕಾರಿಯಾಗಿ ಮಾತನಾಡಿರುವ ಕುರಿತಂತೆ ಕಿಡಿ ಕಾರಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಟಿಪ್ಪು ಸಾಹಸದ ಬಗ್ಗೆ ಬ್ರಿಟಿಷರು ಹಾಡಿ ಹೊಗಳಿದ್ದಾರೆ. ರಾಷ್ಟ್ರಪತಿಗಳು ಸಹ ಟಿಪ್ಪುವನ್ನು ಕೊಂಡಾಡಿದ್ದಾರೆ ಎಂದು ಹೇಳಿದ್ದಾರೆ.
ಅಯ್ಯೋ ಹುಚ್ಮುಂಡೆದೆ ಸತ್ತಿರುವವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡುತ್ತೀಯಾ. ಓಟಿಗಾಗಿ ಚಿಲ್ಲರೆ ಮಾತನಾಡುವುದನ್ನು ನಿಲ್ಲಿಸು ಎಂದು ಹೇಳಿದ ಸಿಎಂ ಇಬ್ರಾಹಿಂ, ಬಾಯಿಗೆ ಬಂದಂತೆ ಮಾತನಾಡುವ ನಿನಗೆ ನಾಚಿಕೆಯಾಗಬೇಕು ಎಂದು ಕಿಡಿ ಕಾರಿದರು.
ಅಲ್ಲದೆ ಗುಂಬಜ್ ರೀತಿಯಲ್ಲಿ ಇರುವ ಬಸ್ ಸ್ಟ್ಯಾಂಡ್ ಒಡೆಯುವುದಾಗಿ ಹೇಳಿರುವ ಪ್ರತಾಪ್ ಸಿಂಹ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿದ ಸಿಎಂ ಇಬ್ರಾಹಿಂ, ಮೈಸೂರು ಅರಮನೆ ಇರುವುದು ಕೂಡ ಗುಂಬಜ್ ರೀತಿಯ ಕಟ್ಟಡ. ಅದನ್ನು ಹೊಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರಲ್ಲದೆ ಪ್ರತಾಪ್ ಸಿಂಹ ಅಶಾಂತಿ ಹುಟ್ಟುಹಾಕುವ ಸಲುವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ ಎಂದರು.