alex Certify ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರಿಗೆ ತಿಳಿದಿರಲಿ ಈ ವಿಷಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳುವವರಿಗೆ ತಿಳಿದಿರಲಿ ಈ ವಿಷಯ

ಈಗ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದ್ದು, ಸಹಸ್ರಾರು ಭಕ್ತರು ಪ್ರತಿನಿತ್ಯ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರುಗಳಿಗೆ ಮಹತ್ವದ ಮಾಹಿತಿ ಇಲ್ಲಿದೆ.

ಮಲೆಯ ಆರೋಹಣ ಕಾಲದಲ್ಲಿ ಹತ್ತು ನಿಮಿಷ ನಡೆದ ಬಳಿಕ ಐದು ನಿಮಿಷ ವಿಶ್ರಮಿಸಬೇಕು. ಸನ್ನಿಧಾನವನ್ನು ತಲಪಲು ಪರಂಪರಾಗತ ದಾರಿಯಾದ ಮರಕ್ಕೂಟ್ಟಂ, ಶರಂಕುತ್ತಿ, ನಡಪ್ಪಂದಲ್ ದಾರಿಯಲ್ಲಿ ಸಾಗಬೇಕು.

ಹದಿನೆಂಟು ಮೆಟ್ಟಿಲುಗಳನ್ನು ತಲಪುವಲ್ಲಿ ಕ್ಯೂವನ್ನು ಪಾಲಿಸಬೇಕು ಮರುಪಯಣದಲ್ಲಿ ನಡಪ್ಪಂದಲ್ನ ಮೇಲ್ಸೇತುವೆಯನ್ನು ಉಪಯೋಗಿಸಬೇಕು.

ಮಲಮೂತ್ರ ವಿಸರ್ಜನೆಗಾಗಿ ಶೌಚಾಲಯಗಳನ್ನೂ ಮೂತ್ರಾಲಯ ಗಳನ್ನೂ ಬಳಸಿಕೊಳ್ಳಬೇಕು.

ಪಂಬೆಯಿಂದ ಸನ್ನಿಧಾನದತ್ತ ಪ್ರಯಾಣ ತೊಡಗುವ ಮೊದಲು ಜನಜಂಗುಳಿಯ ಒತ್ತಡದ ಬಗೆಗೆ ಮನವರಿಕೆ ಮಾಡಿಕೊಳ್ಳಬೇಕು.

ಡೋಲಿಯನ್ನು ಬಳಸಿಕೊಳ್ಳುವಲ್ಲಿ ದೇವಸ್ವಂ ಕೌಂಟರಿನಲ್ಲಿ ಮಾತ್ರ ಅದರ ದರವನ್ನು ಕೊಟ್ಟು ರಸೀದಿ ಪಡೆದು ಅದನ್ನು ಜಾಗರೂಕತೆಯಿಂದ ತೆಗೆದಿಟ್ಟುಕೊಳ್ಳಬೇಕು

ಭದ್ರತಾ ಚೆಕ್ ಪಾಯಿಂಟ್ಗಳಲ್ಲಿ ಭದ್ರತಾ ತಪಾಸಣೆಗಾಗಿ ನೀವೇ ಸಿದ್ಧರಾಗಿರಿ. ಯಾವುದೇ ನೆರವಿಗಾಗಿ ಪೋಲೀಸರನ್ನು ಸಂಪರ್ಕಿಸಬೇಕು

ಸಂಶಯಾಸ್ಪದವಾದ ಯಾವುದನ್ನೇ ಕಂಡರೂ ಕೂಡಲೇ ಪೊಲೀಸರಿಗೆ ತಿಳಿಸಬೇಕು.

ಪರವಾನಗಿ ಇರುವ ಅಂಗಡಿಗಳಿಂದ ಮಾತ್ರವೇ ಖಾದ್ಯ ವಸ್ತುಗಳನ್ನು ಖರೀದಿಸಬೇಕು

ಪಂಬ, ಸನ್ನಿಧಾನ, ಮಲೆಯ ಆರೋಹಣದ ದಾರಿ, ಎಲ್ಲವನ್ನೂ ನಿರ್ಮಲವಾಗಿರುವಂತೆ ನೋಡಿಕೊಳ್ಳಬೇಕು.

ನಿಗದಿಪಡಿಸಿದ ಪಾರ್ಕಿಂಗ್ ಸ್ಲಾಟ್ಗಳಲ್ಲಿ ಮಾತ್ರ ವಾಹನಗಳನ್ನು ನಿಲ್ಲಿಸಿ ತ್ಯಾಜ್ಯಗಳನ್ನು ಅದಕ್ಕಾಗಿ ಮೀಸಲಾಗಿರಿಸಿದ ತ್ಯಾಜ್ಯ ಪೆಟ್ಟಿಗೆಗಳಲ್ಲಿ ಹಾಕಿರಿ.

ಆಕ್ಸಿಜನ್ ಪಾರ್ಲರ್ ಮತ್ತು ಮೆಡಿಕಲ್ ಸೆಂಟರುಗಳ ಸೌಕರ್ಯ ಗಳನ್ನು ಅವಶ್ಯಕತೆಗೆ ಅನುಸಾರವಾಗಿ ಉಪಯೋಗಿಸಿಕೊಳ್ಳಬೇಕು.

ಮಕ್ಕಳು, ವೃದ್ಧರ ಕುತ್ತಿಗೆಯಲ್ಲಿ ವಿಳಾಸ, ದೂರವಾಣಿ ಸಂಖ್ಯೆಗಳನ್ನು ಬರೆದ ಗುರುತಿನ ಕಾರ್ಡನ್ನು ನೇತು ಹಾಕಿರಿ

ಗುಂಪುಗಳು ಅಥವಾ ಸ್ನೇಹಿತರಿಂದ ಬೇರ್ಪಟ್ಟು ಹೋದ ಸಂದರ್ಭಗಳಲ್ಲಿ ಪೊಲೀಸ್ ನೆರವು ಪೋಸ್ಟುಗಳ ಸಹಾಯವನ್ನು ಪಡೆಯಿರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...