alex Certify ಅಮ್ಮನ ಪ್ರಾಣ ಉಳಿಸಿ; ಬ್ಲಾಕ್ ಫಂಗಸ್ ಗೆ ಔಷಧಿ ನೀಡುವಂತೆ ಸರ್ಕಾರದ ಬಳಿ ಕಣ್ಣೀರಿಟ್ಟ ಪುತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮ್ಮನ ಪ್ರಾಣ ಉಳಿಸಿ; ಬ್ಲಾಕ್ ಫಂಗಸ್ ಗೆ ಔಷಧಿ ನೀಡುವಂತೆ ಸರ್ಕಾರದ ಬಳಿ ಕಣ್ಣೀರಿಟ್ಟ ಪುತ್ರಿ

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖಳಾಗಿದ್ದ ತನ್ನ ತಾಯಿ ಇದೀಗ ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿದ್ದು, ಎಂಫೋಟೆರಿಸಿನ್ ಬಿ ಇಂಜಕ್ಷನ್ ಸಿಗದೇ ಪರದಾಡುತ್ತಿದ್ದೇವೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಅಮ್ಮನ ಪ್ರಾಣ ಉಳಿಸಿಕೊಡಿ ಎಂದು ಮಗಳೊಬ್ಬಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ ಶಸಿಕಲಾ ಎಂಬ ಮಹಿಳೆ ಬೆಂಗಳೂರಿನ ಸೆಂಟ್ ಮಾರ್ಥಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಂಫೋಟೆರಿಸಿನ್ ಬಿ ಔಷಧವಿಲ್ಲದೇ ಸಂಕಷ್ಟಕ್ಕೀಡಾಗಿದ್ದಾರೆ. ಔಷಧ ಅಭಾವವಿದೆ. ಸರ್ಕಾರಕ್ಕೂ ಇನ್ನೂ ಔಷಧ ಬಂದು ತಲುಪಿಲ್ಲ. ಇರುವ ನಾಲ್ಕು ಡೋಸ್ ಈಗಾಗಲೇ ಹಾಕಲಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಹೇಗಾದರೂ ಮಾಡಿ ಔಷಧ ಪೂರೈಸುವಂತೆ ಶಶಿಕಲಾ ಮಗಳು ಕಣ್ಣೀರಿಟ್ಟಿದ್ದಾರೆ.

14 ದಿನಗಳ ಕಾಲವಾದರೂ ಇಂಜಕ್ಷನ್ ನೀಡಬೇಕು ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಲಕ್ಷಾಂತರ ರೂಪಾಯಿ ಹಣ ಖರ್ಚಾಗಿದೆ. ಭಿಕ್ಷೆ ಬೀಡಿಯಾದರೂ ಹಣ ಹೊಂದಿಸ್ತೀನಿ. ಆದರೆ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ತಕ್ಷಣ ಔಷಧ ನೀಡಿ ಅಮ್ಮನ ಜೀವ ಉಳಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...