ನೀವೂ ಅಮ್ಮನಾಗಲು ಬಯಸಿದ್ದರೆ ದಯವಿಟ್ಟು ಈ ವಿಷಯದ ಬಗ್ಗೆ ಗಮನವಿರಲಿ. ಗರ್ಭಿಣಿಯಾದಾಗ ಸೋಪ್ ಮತ್ತು ಲೋಷನ್ ಬಳಸುವುದು ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆಯ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.
ಗರ್ಭಾವಸ್ಥೆಯಲ್ಲಿ ಸೌಂದರ್ಯವರ್ಧಕಗಳಿಂದ ಬಹಳಷ್ಟು ದೂರವಿರಬೇಕೆಂದು ಸಂಶೋಧನೆ ಹೇಳಿದೆ. Butylparaben ಜಾಸ್ತಿ ಇರುವ ಸೌಂದರ್ಯ ವರ್ಧಕಗಳನ್ನು ಬಳಸುವುದರಿಂದ ಅಕಾಲಿಕ ಜನನ, ಕಡಿಮೆ ತೂಕದ ಮಗು ಜನಿಸುವ ಸಾಧ್ಯತೆಗಳಿರುತ್ತವೆ.
ನ್ಯೂಯಾರ್ಕ್ ನ ಮೆಡಿಕಲ್ ಸೆಂಟರ್ ಪ್ರಕಾರ ಈ ರಾಸಾಯನಿಕ ಸೋಪ್ ನಲ್ಲಿ ಜಾಸ್ತಿ ಪ್ರಮಾಣದಲ್ಲಿರುತ್ತದೆಯಂತೆ. ಇದರಿಂದ ಅಕಾಲಿಕ ಜನನ ಸಮಸ್ಯೆಯುಂಟಾಗುತ್ತದೆಯಂತೆ. ಕ್ರೀಂನಲ್ಲಿ ಕೂಡ ಈ ರಾಸಾಯನಿಕವನ್ನು ಬಳಸಲಾಗುತ್ತಿದ್ದು, ಇದರಿಂದ ತೂಕ ಸಮಸ್ಯೆ ಎದುರಾಗುತ್ತದೆಯಂತೆ.
ಇದಲ್ಲದೆ ಸಂತಾನೋತ್ಪತ್ತಿ ಸಮಸ್ಯೆ ಕೂಡ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆಯಂತೆ. ಹಾಗಾಗಿ ಈ ರಾಸಾಯನಿಕ ಬಳಸಿರುವ ಸೌಂದರ್ಯವರ್ಧಕಗಳ ಮರು ಮೌಲ್ಯಮಾಪನ ಮಾಡಬೇಕೆಂದು ಒತ್ತಾಯಿಸಲಾಗಿದೆ.