ಅಮೆರಿಕಾಗೆ ತೆರಳಲು ವೀಸಾ ನಿರೀಕ್ಷೆಯಲ್ಲಿರುವ ಭಾರತೀಯರಿಗೆ ಶುಭ ಸುದ್ದಿಯೊಂದು ಇಲ್ಲಿದೆ. ಇನ್ನು ಮುಂದೆ ವೀಸಾಗಾಗಿ ದೀರ್ಘಕಾಲ ಕಾಯುವ ಅವಧಿಗೆ ಕಡಿವಾಣ ಬೀಳಲಿದೆ.
ಹೌದು, 500 ದಿನಗಳ ಕಾಯುವಿಕೆಗೆ ಅಂತ್ಯ ಹಾಡಲು ಹೊಸ ನಿಯಮ ಜಾರಿಗೆ ತರಲಾಗಿದ್ದು, ವಿದೇಶಕ್ಕೆ ತೆರಳಲು ಬಯಸುವ ಭಾರತೀಯರು ತಾವು ವಾಸವಿರುವ ಸ್ಥಳದಲ್ಲಿನ ಅಮೆರಿಕ ರಾಯಭಾರ ಕಚೇರಿ ಅಥವಾ ಕಾನ್ಸುಲೇಟ್ ನಲ್ಲಿ ವೀಸಾ ಅಪಾಯಿಂಟ್ಮೆಂಟ್ ನಿಗದಿ ಮಾಡಿಕೊಳ್ಳಬಹುದಾಗಿದೆ.
ಮೊದಲ ಬಾರಿಗೆ ವೀಸಾಗೆ ಅರ್ಜಿ ಸಲ್ಲಿಸುವವರಿಗೆ ವಿಶೇಷ ಸಂದರ್ಶನ ನಿಗದಿಗೊಳಿಸಲಾಗುತ್ತಿದ್ದು, ಈಗಾಗಲೇ ಬಾಕಿ ಉಳಿದಿರುವ ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಲು ದೆಹಲಿ ರಾಯಭಾರ ಕಚೇರಿ, ಮುಂಬೈ, ಚೆನ್ನೈ, ಕೊಲ್ಕತ್ತಾ ಹಾಗೂ ಹೈದರಾಬಾದ್ ಕಾನ್ಸುಲೇಟ್ ಕಚೇರಿಯಲ್ಲಿ ಜನವರಿ ತಿಂಗಳಲ್ಲಿ ವಿಶೇಷ ಸಂದರ್ಶನ ನಡೆಸಲಾಗಿದೆ.