ಅಮೆರಿಕಾದ ಅಲಾಸ್ಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.3ರಷ್ಟು ತೀವ್ರತೆ ದಾಖಲಾಗಿದೆ. ಈ ಭೂಕಂಪನ ಭೂ ಮೈಲ್ಮೈ ನಿಂದ 125 ಕಿ.ಮೀ ಆಳದಲ್ಲಿ ಸಂಭವಿಸಿದೆ.
ಇದು ಅಂಕಾರೇಜ್ ನೈಋತ್ಯಕ್ಕೆ 138 ಮೈಲಿಗಳಷ್ಟು ದೂರವಿರುವ ಇಲಿಯಾಮ್ನಾ ಜ್ವಾಲಾಮುಖಿ ಹತ್ತಿರ ಸಂಭವಿಸಿದೆ. ಮಂಗಳವಾರ ಮಧ್ಯಾಹ್ನ 1.42ರ ಸುಮಾರಿಗೆ ಭೂಕಂಪನ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂ ವೈಜ್ಞಾನಿಕ ಸಮೀಕ್ಷೆ ಕೇಂದ್ರ ತಿಳಿಸಿದೆ.
ವರದಿಯಂತೆ, ಭೂಕಂಪ ಸಂಭವಿಸಿದ ಪ್ರದೇಶದಲ್ಲಿ 5.9ರಷ್ಟು ತೀವ್ರತೆಯಷ್ಟು ಭೂಮಿ ಕಂಪಿಸಿದೆ. ಅಲಾಸ್ಕಾದ ಕೆನೈ ಪೆನಿನ್ಸುಲಾದಿಂದ ಕುಕ್ ಇನ್ಲೆಟ್ನಾದವರೆಗ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಭೂಕಂಪನದಿಂದ ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ – ಪಾಸ್ತಿ ಹಾನಿಯಾಗಿಲ್ಲ ಎನ್ನಲಾಗಿದೆ.