alex Certify ಅಮೆರಿಕವನ್ನೇ ಹಿಂದಿಕ್ಕಿದೆ ಭಾರತ, ಇಲ್ಲಿ ತಲೆಯೆತ್ತಿದೆ ಪೆಂಟಗನ್‌ಗಿಂತಲೂ ದೊಡ್ಡ ಕಚೇರಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕವನ್ನೇ ಹಿಂದಿಕ್ಕಿದೆ ಭಾರತ, ಇಲ್ಲಿ ತಲೆಯೆತ್ತಿದೆ ಪೆಂಟಗನ್‌ಗಿಂತಲೂ ದೊಡ್ಡ ಕಚೇರಿ….!

ಜಗತ್ತಿನ ಅತಿ ದೊಡ್ಡ ಕಚೇರಿ ಎಲ್ಲಿದೆ? ಈ ಕಟ್ಟಡದ ಹೆಸರೇನು ಗೊತ್ತಾ…? ಮೊದಲು ಈ ಹೆಗ್ಗಳಿಕೆ ಅಮೆರಿಕದ ಪೆಂಟಗನ್ ಕಟ್ಟಡಕ್ಕಿತ್ತು. ಆದ್ರೀಗ ಭಾರತ ಅಮೆರಿಕವನ್ನು ಹಿಂದಿಕ್ಕಿದೆ. ಭಾರತದಲ್ಲಿ ವಿಶ್ವದ ಅತಿದೊಡ್ಡ ಕಚೇರಿ ನಿರ್ಮಾಣವಾಗಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ವಿಶೇಷ ಕಟ್ಟಡ ತಲೆಯೆತ್ತಿದೆ/ ಸೂರತ್, 4 ವರ್ಷಗಳ ನಂತರ ಅತಿ ದೊಡ್ಡ ವಜ್ರ ವಿನಿಮಯ ಕೇಂದ್ರವಾಗಿದೆ. ಇದು ಅಮೆರಿಕದ ಪೆಂಟಗನ್ಗಿಂತಲೂ ದೊಡ್ಡ ಕಚೇರಿ ಅನ್ನೋದು ವಿಶೇಷ.

ಈ ಕಟ್ಟಡದಲ್ಲಿ ಗರಿಷ್ಠ ಸಂಖ್ಯೆಯ ಉದ್ಯೋಗಿಗಳು ಕೆಲಸ ಮಾಡಬಹುದು. ವರದಿಗಳ ಪ್ರಕಾರ, ಸುಮಾರು 65,000 ಡೈಮಂಡ್ ಉದ್ಯೋಗಿಗಳು ಈ ಕಟ್ಟಡದಲ್ಲಿ ಕೆಲಸ ಮಾಡಬಹುದು.

ಕಟ್ಟಡದ ಹೆಸರೇನು?

ವಿಶ್ವದ ಅತಿ ದೊಡ್ಡ ಕಟ್ಟಡಕ್ಕೆ ಡೈಮಂಡ್ ಬೋರ್ಸ್ ಎಂದು ಹೆಸರಿಡಲಾಗಿದೆ. ಈ ಕಟ್ಟಡದಲ್ಲಿ ವಜ್ರ ವ್ಯಾಪಾರಕ್ಕೆ ಸಂಬಂಧಿಸಿದ ಕಟ್ಟರ್‌ಗಳು, ಪಾಲಿಷ್‌ ಮಾಡುವವರು ಮತ್ತು ಎಲ್ಲಾ ಉದ್ಯಮಿಗಳಿಗೆ ಅತ್ಯುತ್ತಮ ಸೌಲಭ್ಯಗಳನ್ನು ಒದಗಿಸಲಾಗಿದೆ.

ಪ್ರಧಾನಿ ಮೋದಿ ಅವರಿಂದ ಉದ್ಘಾಟನೆ!

ಈ ಕಟ್ಟಡದ ವಿಸ್ತೀರ್ಣ 67 ಲಕ್ಷ ಚದರ ಅಡಿ ಮತ್ತು ಈ ಕಟ್ಟಡದಲ್ಲಿ 15 ಮಹಡಿಗಳಿವೆ. ನವೆಂಬರ್‌ನಲ್ಲಿ ಪ್ರಧಾನಿ ಮೋದಿ ಈ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ. ಈ ಕಟ್ಟಡವನ್ನು ನಿರ್ಮಿಸಲು ಸುಮಾರು 4 ವರ್ಷಗಳೇ ಬೇಕಾಯ್ತು. ಹೀಗಾಗಿಯೇ ಈ ಕಟ್ಟಡ ವಿಶ್ವ ದಾಖಲೆಯ ಪುಟ ಸೇರಿದೆ. ಮುಂಬೈನಿಂದ ಬರುವ ಸಾವಿರಾರು ಉದ್ಯೋಗಿಗಳಿಗೆ ಇದರಿಂದ ಹೆಚ್ಚಿನ ಸಹಾಯವಾಗಲಿದೆ. ಈ ಕಟ್ಟಡದಲ್ಲಿ 131 ಎಲಿವೇಟರ್‌ಗಳು ಮತ್ತು ಇತರ ಸೌಲಭ್ಯಗಳಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...