ಅಮೆರಿಕದಲ್ಲಿ ಉದ್ಯೋಗ ಮಾಡಬೇಕೆಂಬುದು ಬಹುತೇಕರ ಕನಸಾಗಿರುತ್ತದೆ. ಆದರೆ ವೀಸಾ ಕುರಿತ ಬಿಗಿ ನಿಯಮಗಳ ಕಾರಣಕ್ಕೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇದರ ಮಧ್ಯೆ ಶುಭ ಸುದ್ದಿಯೊಂದು ಇಲ್ಲಿದೆ.
ಭಾರತವೂ ಸೇರಿದಂತೆ ವಿವಿಧ ರಾಷ್ಟ್ರಗಳ ಸಾಫ್ಟ್ ವೇರ್ ಇಂಜಿನಿಯರ್ ಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಮುಂದಿನ ವರ್ಷ ಅಂದರೆ 2024ರಲ್ಲಿ ಎಚ್-1ಬಿ ವೀಸಾ ಪಡೆಯುವ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ಸಿಗಲಿದೆ.
ಮಾರ್ಚ್ 1ರಿಂದ 17ರವರೆಗೆ ಪ್ರಾಥಮಿಕ ನೋಂದಣಿ ನಡೆಯಲಿದ್ದು, ಆಕಾಂಕ್ಷಿಗಳು ಪ್ರಾಥಮಿಕ ಶುಲ್ಕ 10 ಡಾಲರ್ ಪಾವತಿಸಲು ಫೆಬ್ರವರಿ 21ರ ನಂತರ ಹೊಸ ಡಿಜಿಟಲ್ ಖಾತೆಗಳನ್ನು my – uscis ಪೋರ್ಟಲ್ ನಲ್ಲಿ ತೆರೆಯಬಹುದಾಗಿದೆ. ಬಳಿಕ ಅಂದರೆ ಮಾರ್ಚ್ 1ರಿಂದ ಆನ್ಲೈನ್ ಮೂಲಕ ಅಭ್ಯರ್ಥಿಗಳು ತಮ್ಮ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.