ಕುಡಿದ ಅಮಲಿನಲ್ಲಿ ಕೆಲವೊಬ್ಬರು ಮಾಡುವ ಪುಂಡಾಟಿಕೆ ಹೇಳತೀರದು. ಇವರುಗಳು ಸ್ವತಃ ಅನಾಹುತ ಮಾಡಿಕೊಳ್ಳುವುದರ ಜೊತೆಗೆ ಇನ್ನೊಬ್ಬರಿಗೂ ಸಹ ತೊಂದರೆ ನೀಡುತ್ತಾರೆ. ಇಂತಹ ಪ್ರಕರಣಗಳ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯಾಗಿದೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಹಾನಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟನಾಯಕನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಮಂಗಳವಾರದಂದು ಕಂಠಪೂರ್ತಿ ಕುಡಿದಿದ್ದ ಓಬಣ್ಣ ಎಂಬಾತ ಕರೆಂಟ್ ಕಂಬ ಏರಿದ್ದಾನೆ.
ಇದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೂಡಲೇ ಬೆಸ್ಕಾಂ ಕಚೇರಿಯ ಸಿಬ್ಬಂದಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಮನವಿ ಮಾಡಿದ್ದಾರೆ. ಅಲ್ಲದೆ ಓಬಣ್ಣನನ್ನು ಕೆಳಗಿಳಿಸಲು ಪರಿಪರಿಯಾಗಿ ಮನವಿ ಮಾಡಿದ್ದಾರೆ. ಗಂಟೆಗಳ ಬಳಿಕ ಕೊನೆಗೂ ಆತ ಕೆಳಗಿಳಿದ್ದು ಬಂದಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.