ನಟ ರಣವೀರ್ ಸಿಂಗ್ ಅವರು ಸಾರ್ವಜನಿಕವಾಗಿ ಅಳಲು ಇಷ್ಟಪಡುವುದಿಲ್ಲ, ಇದನ್ನ ಅವರು ಸಾಕಷ್ಟು ಇಂಟರ್ವ್ಯೂಗಳಲ್ಲಿ ಹೇಳಿಕೊಂಡಿದ್ದಾರೆ. ಆದರೆ ಅವರ ಹೊಸ ಚಿತ್ರ ʼ83ʼ ಸ್ವೀಕರಿಸುತ್ತಿರುವ ಪ್ರೀತಿಗೆ ರಣ್ವೀರ್ ಮೂಕವಿಸ್ಮಿತರಾಗಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಮನಸೋತಿರುವ ಬಾಲಿವುಡ್ ಸ್ಟಾರ್ ಕಣ್ಣೀರನ್ನ ಮರೆಮಾಚದೆ ಅತ್ತಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರಣವೀರ್, ಕಳೆದ ಎರಡು ವರ್ಷಗಳಿಂದ ನಾವು ಸಾಂಕ್ರಾಮಿಕ ರೋಗವನ್ನ ಎದುರಿಸಿದ್ದೇವೆ, ಆದರೂ ಜನ ನನ್ನ ಚಿತ್ರಕ್ಕೆ ನೀಡುತ್ತಿರುವ ಪ್ರೀತಿಗೆ ಋಣಿಯಾಗಿದ್ದೇನೆ. ಅವರ ಪ್ರೀತಿಯಲ್ಲಿ ಮುಳುಗಿದ್ದೇನೆ, ನಾನು ಆಕ್ಟರ್ ಆಗಿರುವುದೆ ನನ್ನ ಪಾಲಿಗೆ ಒಂದು ದೊಡ್ಡ ಪವಾಡ ಎಂದು ಕಣ್ಣೀರು ಹಾಕಿಕೊಂಡೇ ಮಾತನಾಡಿದ್ದಾರೆ.
ಈ ಬಗ್ಗೆ ಏಕೆ ಪ್ರಶ್ನಿಸಿದಾಗ, ವಾಸ್ತವವಾಗಿ ನೋಡಿ, ಯಶಸ್ವಿಯಾಗಲು ನನಗೆ ಯಾವ ಅವಕಾಶಗಳಿದ್ದವು..? ನಾನು ಆಕ್ಟಿಂಗ್ ಕರಿಯರ್ ಶುರು ಮಾಡಿದಾಗಿಂದ್ಲು ಜನರು ನನ್ನನ್ನ ಒಪ್ಪಿಕೊಂಡಿದ್ದಾರೆ, ನನ್ನ ಸಿನಿ ಕೆರಿಯರ್ ಶುರುವಿನಲ್ಲಿ ನನ್ನನ್ನ ಹೀಯಾಳಿಸಿದ್ದವರು ಈ ಸಿನಿಮಾದ ಪರ್ಫಾಮೆನ್ಸ್ ಗೆ ಬೇಷ್ ಎಂದಿದ್ದಾರೆ. ಒಬ್ಬ ನಟನಿಗೆ ಇದಕ್ಕಿಂತ ಇನ್ನೇನು ಬೇಕು ಎಂದು ಮತ್ತೆ ಎಮೋಷನಲ್ ಆದರು.
BIG NEWS: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಬಿ.ವೈ. ವಿಜಯೇಂದ್ರ ಸೇರಿ ಹೊಸ ಟೀಂ, ನಿಷ್ಕ್ರಿಯ ಸಚಿವರಿಗೆ ಗೇಟ್ ಪಾಸ್
83, ಭಾರತ ಕ್ರಿಕೆಟ್ ತಂಡದ ಅತ್ಯಂತ ಮುಖ್ಯ ಘಟ್ಟವನ್ನ ವೀಕ್ಷಕರ ಮುಂದಿಟ್ಟಿದೆ. ಭಾರತ ಮೊದಲ ವಿಶ್ವಕಪ್ ಗೆದ್ದ ಬ್ಯಾಕ್ ಸ್ಟೋರಿ ಅಭಿಮಾನಿಗಳ ಮನಸನ್ನ ಗೆದ್ದಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ಪಾತ್ರ ನಿರ್ವಹಿಸಿರುವ ರಣವೀರ್ ತಮ್ಮ ಅಮೋಘ ಅಭಿನಯದ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ.