
ಸಚಿನ್ ತೆಂಡೂಲ್ಕರ್ ಒಬ್ಬ ಅತ್ಯದ್ಭುತ ಕ್ರಿಕೆಟರ್ ಮಾತ್ರವಲ್ಲ ಶ್ರೇಷ್ಠ ವ್ಯಕ್ತಿ ಅನ್ನೋದು ಮತ್ತೆ ಮತ್ತೆ ಸಾಬೀತಾಗ್ತಾ ಇದೆ. ಕ್ರಿಕೆಟ್ ದೇವರಿಗೆ ಇರೋ ಮಾನವೀಯತೆ ಅಭಿಮಾನಿಗಳಿಗೂ ಇಷ್ಟವಾಗ್ತಾ ಇದೆ. ಹಸಿದ ಬೀದಿ ನಾಯಿಗಳಿಗೆ ಊಟ ಹಾಕುವುದು ಸಚಿನ್ ಗೆ ಇಷ್ಟದ ಕೆಲಸ.
ಇದೀಗ ಗಾಯಗೊಂಡಿದ್ದ ಪಕ್ಷಿಯೊಂದನ್ನು ಮಾಸ್ಟರ್ ಬ್ಲಾಸ್ಟರ್ ರಕ್ಷಣೆ ಮಾಡಿದ್ದಾರೆ. ಬಿಳಿ ಬಣ್ಣದ ಹಕ್ಕಿಯನ್ನು ಪ್ರೀತಿಯಿಂದ ಎತ್ತಿಕೊಂಡು ಬಂದ ಸಚಿನ್ ಅದಕ್ಕೆ ನೀರು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ತಿನ್ನಲು ಬನ್ ಕೊಟ್ಟಿದ್ದಾರೆ.
ಕೊಂಚ ಚೇತರಿಸಿಕೊಂಡ ಬಳಿಕ ಬಾನಾಡಿಗೆ ಮೇಲಕ್ಕೆ ಹಾರಲು ಕೂಡ ಸಹಾಯ ಮಾಡಿದ್ದಾರೆ. ಸಚಿನ್ ಈ ವಿಡಿಯೋವನ್ನು ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗ್ತಾ ಇದೆ. ಹಲವರು ಇದನ್ನು ಲೈಕ್, ಶೇರ್ ಮಾಡುವ ಮುಖಾಂತರ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
https://youtu.be/w0HChZk2xIM