ಸಿಹಿ ಖಾದ್ಯಗಳ ಮೇಲೆ ಭಾರತೀಯರ ಪ್ರೀತಿ ಎಷ್ಟಿದೆ ಎಂಬುದನ್ನು ಹೇಳೋಕೆ ಬಹುಶಃ ಪೀಠಿಕೆ ಅಗತ್ಯವಿಲ್ಲ. ಮದುವೆ, ಹಬ್ಬ ಮುಂತಾದ ಸಮಾರಂಭಗಳಲ್ಲಿ ಸಿಹಿ ತಿಂಡಿ ಇರಲೇಬೇಕು. ಹಲವರು ಇದನ್ನು ಖರೀದಿಸಲು ಸರತಿ ಸಾಲಲ್ಲಿ ನಿಂತಾದ್ರೂ ಸರಿ ಗಂಟೆಗಟ್ಟಲೇ ಕಾಯುತ್ತಾರೆ.
ಭಾರತದಲ್ಲಂತೂ ಸಿಹಿತಿಂಡಿಗಳಿಗೆ ಯಾವುದೇ ಕೊರತೆಯಿಲ್ಲದಿದ್ದರೂ, ಕೆಲವೊಮ್ಮೆ ಅವುಗಳಿಗೆ ಹೆಚ್ಚಿನ ಬೆಲೆಯನ್ನು ಪಾವತಿಸಲು ಹಲವರು ಹಿಂದೇಟು ಹಾಕುತ್ತಾರೆ. ಇನ್ನೂ ಕೆಲವರು ಹಣ ಎಷ್ಟಾದ್ರೂ ಆಗ್ಲಿ ತಾವಿಷ್ಟಪಟ್ಟ ಸಿಹಿ ತಿಂಡಿಯನ್ನು ಕೊಂಡುಕೊಳ್ಳುವ ಮನಸ್ಸು ಮಾಡುತ್ತಾರೆ. ಆದರೆ, ಒಂದು ಕೆ.ಜಿ ಸಿಹಿತಿಂಡಿಗೆ 16,000 ರೂ. ಕೊಡುತ್ತೀರಾ?! ಅಂತಹ ದುಬಾರಿ ಸಿಹಿ-ತಿಂಡಿ ನಿಜವಾಗಲೂ ಇದೆಯಾ ಅಂತಾ ಆಶ್ಚರ್ಯ ಪಡುತ್ತಿದ್ದೀರಾ..? ಹಾಗಿದ್ರೆ ಬನ್ನಿ, ಅದೇನು ಅಂತಾ ತಿಳಿದುಕೊಳ್ಳಲು ಮುಂದೆ ಓದಿ…..
ಹೌದು, ಇದು ಅಂತಿಂಥ ಸಿಹಿ ತಿಂಡಿಯಲ್ಲ, ಬಂಗಾರದ ಸ್ವೀಟ್ಸ್..! ಹೌದು, ಈ ಸ್ವೀಟ್ ನಿಮಗೆ ಬೇಕು ಅಂತಾದಲ್ಲಿ ಪ್ರತಿ ಕೆ.ಜಿ.ಗೆ 16,000 ರೂ. ಪಾವತಿಸಬೇಕು..! ಇನ್ಸ್ಟಾಗ್ರಾಂನಲ್ಲಿ ಇದರ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಅಂಗಡಿಯವನು ಸಿಹಿತಿಂಡಿಗಳ ರುಚಿಕರವಾದ ತಟ್ಟೆಯನ್ನು ತೋರಿಸುವುದರೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ನಂತರ ಎರಡು ಚಿನ್ನದ ಶೀಟ್ ಗಳನ್ನು ತೆಗೆದು ಸ್ವೀಟ್ ಮೇಲೆ ಹಾಕಲಾಗುತ್ತದೆ.
ಈ ವಿಶಿಷ್ಟ ಸಿಹಿತಿಂಡಿಯನ್ನು ದೆಹಲಿಯ ಮೌಜ್‌ಪುರದಲ್ಲಿರುವ ಶಗುನ್ ಸ್ವೀಟ್ಸ್‌ನಲ್ಲಿ ಮಾರಾಟ ಮಾಡಲಾಗುತ್ತದೆ. ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಬಳಿಕ ಇದು 10.9 ಮಿಲಿಯನ್ ವೀಕ್ಷಣೆಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ.
ಕೆಲವರು ನೋಡಲು ಆಕರ್ಷಕವಾಗಿದೆ ಎಂದು ಹೇಳಿದ್ರೆ, ಇನ್ನೂ ಕೆಲವರು ಈ ಸಿಹಿ ಖರೀದಿಸುವ ಬದಲು, ಹೊಸ ಫೋನ್ ಖರೀದಿಸಬಹುದು ಎಂದು ಟೀಕಿಸಿದ್ದಾರೆ.
https://www.youtube.com/watch?v=cjrhDW2rvt4