
ಗಲ್ಫ್ ರಾಷ್ಟ್ರ ಅಬುಧಾಬಿಯಲ್ಲಿ ಮೊದಲ ಹಿಂದೂ ದೇಗುಲ ನಿರ್ಮಾಣವಾಗುತ್ತಿದ್ದು, ಮೂರು ದಿನಗಳ ಭೇಟಿಗಾಗಿ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) ಕ್ಕೆ ಆಗಮಿಸಿರುವ ವಿದೇಶಾಂಗ ಸಚಿವ ಎಸ್. ಜೈಶಂಕರ್ ದೇಗುಲ ನಿರ್ಮಾಣ ಸ್ಥಳವನ್ನು ವೀಕ್ಷಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಗಣೇಶ ಚತುರ್ಥಿ ದಿನದಂದು ಅಬುಧಾಬಿಯ ಇಂದು ದೇಗುಲ ನಿರ್ಮಾಣ ಸ್ಥಳಕ್ಕೆ ಭೇಟಿ ನೀಡಿದ್ದೆ. ತ್ವರಿತ ಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ನೋಡಿ ಸಂತಸಗೊಂಡಿದ್ದೇನೆ ಎಂದಿದ್ದಾರೆ.
ಜೊತೆಗೆ BAPS ತಂಡದ ಶ್ರಮವನ್ನು ಸಹ ಶ್ಲಾಘಿಸಿರುವ ಅವರು, ದೇಗುಲ ನಿರ್ಮಾಣ ಸ್ಥಳದಲ್ಲಿ ಭಕ್ತರು ಹಾಗೂ ಕೆಲಸಗಾರರನ್ನು ಸಹ ಭೇಟಿ ಮಾಡಿದ್ದೆ ಎಂದು ತಿಳಿಸಿದ್ದಾರೆ.