ತನ್ನ ಆಡಳಿತದ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನದ ಮಹಿಳೆಯರ ಗತಿ ಏನಾಗಬಹುದು ಎಂಬ ಸಂದೇಶ ಸಾರುವ ನಡೆಯೊಂದರಲ್ಲಿ, ಬ್ಯೂಟಿ ಸಲೋನ್ ಒಂದರಲ್ಲಿದ್ದ ಮಹಿಳೆಯ ಚಿತ್ರವೊಂದಕ್ಕೆ ಕಪ್ಪು ಬಣ್ಣ ಬಳಿದಿದ್ದಾರೆ ಭಯೋತ್ಪಾದಕರು.
1990ರ ದಶಕದಲ್ಲಿ ಅಫ್ಘಾನಿಸ್ತಾನವನ್ನು ಆಳುತ್ತಿದ್ದ ಮೂಲಭೂತವಾದಿ ಭಯೋತ್ಪಾದಕರ ಸಂಘಟನೆ ತಾಲಿಬಾನ್, ಮಹಿಳೆಯರಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡದೇ ಅತ್ಯಂತ ದಯನೀಯಯಾಗಿ ನಡೆಸಿಕೊಳ್ಳುತ್ತಿದ್ದ ಬಗ್ಗೆ ಇತಿಹಾಸದ ಪುಟಗಳಲ್ಲಿ ಬಹಳಷ್ಟು ಬರೆಯಲಾಗಿದೆ.
ಟೆನ್ನಿಸ್ ಅಂಗಳಕ್ಕೆ ಇಳಿಯಲು ಕಡ್ಡಾಯವಾದರೆ ಮಾತ್ರವೇ ಕೊರೊನಾ ಲಸಿಕೆ ಪಡೆಯುವೆ ಎಂದ ಖ್ಯಾತ ಆಟಗಾರ
ಇದೀಗ ಅಂಥದ್ದೇ ನೆನಪುಗಳನ್ನು 21ನೇ ಶತಮಾನದಲ್ಲಿ ಮರುಕಳಿಸುವ ರೀತಿಯ ವರ್ತನೆಯ ಝಲಕ್ಗಳನ್ನು ಕಾಬೂಲ್ನ ಬೀದಿಗಳಿಂದ ಬರುತ್ತಿರುವ ವಿಡಿಯೋ ಫುಟೇಜ್ಗಳು ತೋರುತ್ತಿವೆ.