alex Certify ಅಪ್ರಾಪ್ತೆಯರ ಬಾಲ್ಯ ವಿವಾಹದಲ್ಲೂ ಮುಂದಿದೆ ವಾಮಾಚಾರದಿಂದ ಕುಖ್ಯಾತಿಗೀಡಾಗಿದ್ದ ಈ ರಾಜ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ರಾಪ್ತೆಯರ ಬಾಲ್ಯ ವಿವಾಹದಲ್ಲೂ ಮುಂದಿದೆ ವಾಮಾಚಾರದಿಂದ ಕುಖ್ಯಾತಿಗೀಡಾಗಿದ್ದ ಈ ರಾಜ್ಯ…!

ವಾಮಾಚಾರದ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್ ಈಗ ಮತ್ತೊಂದು ಅಪಖ್ಯಾತಿಗೆ ಒಳಗಾಗಿದೆ. ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆಯ ಪ್ರಕಾರ, ಜಾರ್ಖಂಡ್‌ನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಪ್ರಾಪ್ತೆಯರ ಮದುವೆ ನಡೆಯುತ್ತಿದೆ.

ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿ ನಡೆಸಿರೋ ಸಮೀಕ್ಷೆಯ ಪ್ರಕಾರ ಜಾರ್ಖಂಡ್‌ನಲ್ಲಿ 18 ವರ್ಷ ತುಂಬುವ ಮೊದಲೇ ಶೇ.5.8ರಷ್ಟು ಬಾಲಕಿಯರಿಗೆ ಮದುವೆ ಮಾಡಲಾಗುತ್ತಿದೆ. ಅಪ್ರಾಪ್ತೆಯರ ವಿವಾಹ ಪ್ರಮಾಣ ಇಡೀ ದೇಶದಲ್ಲಿ ಶೇ.1.9ರಷ್ಟಿದೆ. ಕೇರಳದಲ್ಲಿ ಈ ಪ್ರಮಾಣ ಶೂನ್ಯ ಅನ್ನೋದು ಗಮನಾರ್ಹ.

ಮಾದರಿ ನೋಂದಣಿ ವ್ಯವಸ್ಥೆ (SRS) ಅಂಕಿಅಂಶಗಳ ವರದಿಯು ಸುಮಾರು 8.4 ಮಿಲಿಯನ್ ಮಾದರಿ ಜನಸಂಖ್ಯೆಯನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ಜನಸಂಖ್ಯಾ ಸಮೀಕ್ಷೆಯನ್ನು 2020ರಲ್ಲಿ ನಡೆಸಿತ್ತು. ಜನಸಂಖ್ಯೆ, ಫಲವತ್ತತೆ ಮತ್ತು ಮರಣ ಸೂಚಕಗಳ ಅಂದಾಜುಗಳನ್ನು ಇದು ಒಳಗೊಂಡಿದೆ.

ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು 21 ವರ್ಷ ವಯಸ್ಸನ್ನು ತಲುಪುವ ಮೊದಲು ಮದುವೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 54.9 ಪ್ರತಿಶತದಷ್ಟು ಹುಡುಗಿಯರು 21 ವರ್ಷ ವಯಸ್ಸನ್ನು ತಲುಪುವ ಮೊದಲು ಮದುವೆಯಾಗಿದ್ದರೆ, ಜಾರ್ಖಂಡ್‌ನಲ್ಲಿ ಈ ಪ್ರಮಾಣ ಸುಮಾರು 54.6 ಪ್ರತಿಶತದಷ್ಟಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ಜಾರ್ಖಂಡ್‌ನಲ್ಲಿ 2015 ರಲ್ಲಿ 32 ಮಂದಿ, 2016 ರಲ್ಲಿ 27, 2017 ರಲ್ಲಿ 19, 2018 ರಲ್ಲಿ 18, ಮತ್ತು 2019 ಮತ್ತು 2020 ರಲ್ಲಿ ತಲಾ 15 ಜನರು ವಾಮಾಚಾರದಿಂದ ಸಾವನ್ನಪ್ಪಿದ್ದಾರೆ.

ಇತ್ತೀಚೆಗಷ್ಟೇ ಬಾಲಕಿಯೊಬ್ಬಳಿಗೆ ಬೆಂಕಿ ಹಚ್ಚಲಾಗಿತ್ತು. ಆಗಸ್ಟ್ 23 ರಂದು ಬಾಲಕಿ ಮಲಗಿದ್ದಾಗ ಆಕೆಯ ಕೋಣೆಯ ಕಿಟಕಿಯ ಹೊರಗಿನಿಂದ ಪೆಟ್ರೋಲ್ ಸುರಿದು ಪಾತಕಿ ಬೆಂಕಿ ಹಚ್ಚಿದ್ದ. ನಾಲ್ಕು ದಿನಗಳ ನಂತರ ಬಾಲಕಿ ಮೃತಪಟ್ಟಿದ್ದಳು.

ಮದುವೆಯ ನೆಪದಲ್ಲಿ ಪುರುಷನಿಂದ ಲೈಂಗಿಕ ಶೋಷಣೆಗೆ ಒಳಗಾದ 14 ವರ್ಷದ ಬುಡಕಟ್ಟು ಬಾಲಕಿ ಸೆಪ್ಟೆಂಬರ್ 2 ರಂದು ದುಮ್ಕಾದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ಎರಡೂ ಘಟನೆಗಳನ್ನು ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತನಿಖೆ ನಡೆಸುತ್ತಿದೆ. ಈ ಮಧ್ಯೆ ಬಾಲಕಿಯೊಬ್ಬಳು ಆಸಿಡ್ ದಾಳಿಗೆ ತುತ್ತಾಗಿದ್ದು, ಉತ್ತಮ ಚಿಕಿತ್ಸೆಗಾಗಿ ರಾಜ್ಯ ಸರ್ಕಾರವು ನವದೆಹಲಿಯ ಏಮ್ಸ್‌ಗೆ ಕಳುಹಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...