ತನ್ನ ಸ್ನೇಹಿತನ ಅಪ್ರಾಪ್ತ ಸಹೋದರಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಅಡಿಯಲ್ಲಿ ಕೊಲ್ಹಾಪುರದ ವ್ಯಕ್ತಿಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿದೆ. ಜಾಮೀನು ನೀಡುವ ವೇಳೆಯಲ್ಲಿ ಸಂತ್ರಸ್ತ ಬಾಲಕಿಯು 16 ವರ್ಷ 6 ತಿಂಗಳ ಪ್ರಾಯದವಳಾಗಿದ್ದು ಈಕೆಗೆ ಅತ್ಯಾಚಾರ ಹಾಗೂ ಅದರ ಪರಿಣಾಮಗಳ ಬಗ್ಗೆ ಮೊದಲೇ ಅರಿವಿತ್ತು ಎಂದು ಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಸಿ.ವಿ. ಭಡಾಂಗ್ ನೇತೃತ್ವದ ಪೀಠವು ಆರೋಪಿಯು ಸಂತ್ರಸ್ತೆಯ ಜೊತೆಯಲ್ಲಿ ಬಲವಂತದಿಂದ ಲೈಂಗಿಕ ಸಂಪರ್ಕ ಹೊಂದಿರಲಿಲ್ಲ. ಅಲ್ಲದೇ ಈ ಕೃತ್ಯ ಎಸಗುವ ವೇಳೆಯಲ್ಲಿ ಆರೋಪಿಯು ಕಾಂಡೋಮ್ ಧರಿಸಿದ್ದ ಎಂದು ಹೇಳಿದೆ.
ಈ ಪ್ರಕರಣದ ತನಿಖೆಯು ಪೂರ್ಣಗೊಂಡಿದೆ ಹಾಗೂ ಚಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ ಎಂದು ಜಾಮೀನು ನೀಡುವ ವೇಳೆಯಲ್ಲಿ ನ್ಯಾಯಮೂರ್ತಿ ಭದಂಗ್ ಹೇಳಿದ್ದಾರೆ. ಆರೋಪಿಯು ಸುಮಾರು 2 ವರ್ಷ, ಆರು ತಿಂಗಳುಗಳ ಕಾಲ ಕಸ್ಟಡಿಯಲ್ಲಿದ್ದಾನೆ ಎಂಬುದನ್ನು ಕೋರ್ಟ್ ಗಮನಿಸಿದೆ.
2019ರ ಸೆಪ್ಟೆಂಬರ್ 9ರಂದು ಕೊಲ್ಹಾಪುರದಲ್ಲಿ ಪೋಲೀಸರಿಂದ ಬಂಧಿಸಲ್ಪಟ್ಟು ಅಂದಿನಿಂದ ಕಂಬಿ ಹಿಂದೆ ಇರುವ ರೋಹಿತ್ ಸುಕಾಟೆಗೆ ಕೋರ್ಟ್ ಜಾಮೀನು ನೀಡಿದೆ.