ಶಿವಮೊಗ್ಗ : ಅಪ್ಪು ನಮ್ಮನ್ನು ಅಗಲಿ ಹಲವು ದಿನಗಳೇ ಕಳೆದಿವೆ. ಇಂದಿಗೂ ಪುನೀತ್ ಜನಮಾನಸದಲ್ಲಿಯೇ ಉಳಿದಿದ್ದಾರೆ. ಅವರು ನಟಿಸಿದ್ದ ರಾಜಕುಮಾರ್ ಚಿತ್ರದಲ್ಲಿ ಪಾರಿವಾಳವೊಂದು ಅವರ ಹೆಗಲ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಆ ದೃಶ್ಯವನ್ನು ಇಂದಿಗೂ ಅಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಎನ್ನುವಷ್ಟು ಇಷ್ಟಪಡುತ್ತಾರೆ. ಅದೇ ರೀತಿ ಇಲ್ಲೊಂದು ನೈಜ ಘಟನೆ ನಡೆದಿದೆ.
ಜಿಲ್ಲೆಯ ತ್ಯಾವರೆಕೊಪ್ಪ ಗ್ರಾಮದಲ್ಲಿನ ಲಕ್ಷೀಪತಿ ಎಂಬುವವರ ಮನೆಯಲ್ಲಿ ಪುನೀತ್ ನಿಧನದ ನಂತರ ಅವರ ಫೋಟೋ ಇಟ್ಟು ಪೂಜೆ ಮಾಡಲಾಗುತ್ತಿದೆ. ಹೀಗೆ ಪೂಜೆ ಮಾಡಿದ ಮೇಲೆ ಅವರ ಫೋಟೋ ಪಕ್ಕದಲ್ಲಿಯೇ ಪಾರಿವಾಳ ಬಂದು ಕುಳಿತು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ಘೋರ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್: CDS ಬಿಪಿನ್ ರಾವತ್, ಪತ್ನಿ ಮತ್ತು 11 ಮಂದಿ ಸಾವು
ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದ ನಂತರ ಅವರ ಫೋಟೋಗಳಿಗೆ ಹೆಚ್ಚಿನ ಬೇಡಿಕೆ ಬಂದಿತ್ತು. ಅಭಿಮಾನಿಗಳು ಮುಗಿಬಿದ್ದು ಅವರ ಫೋಟೋ ಖರೀದಿಸಿ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಹೀಗೆಯೇ ಲಕ್ಷೀಪತಿ ಕೂಡ ಫೋಟೋ ಖರೀದಿಸಿ, ಮನೆಯಲ್ಲಿಟ್ಟು ಪ್ರತಿ ದಿನ ಪೂಜೆ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಪಾರಿವಾಳ ಹಾರಿ ಬಂದು ಫೋಟೋ ಪಕ್ಕದಲ್ಲಿಯೇ ಕುಳಿತುಕೊಂಡಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಆಶ್ಚರ್ಯ ಪಡುತ್ತಿದ್ದಾರೆ. ಹಲವರು ಕಣ್ಣೀರು ಸುರಿಸುತ್ತಿದ್ದಾರೆ.