ಕೆಲವೊಮ್ಮೆ ಅಡುಗೆ ಮಾಡುವಾಗ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವಾಗ ಆಕಸ್ಮಿಕವಾಗಿ ಬೆಂಕಿ ಕೈಗೆ ತಾಗಿ ಸುಟ್ಟ ಗಾಯವಾಗುತ್ತದೆ. ತಕ್ಷಣ ಇದಕ್ಕೆ ಕೆಲವರು ಮನೆಮದ್ದುಗಳನ್ನು ಹಚ್ಚುತ್ತಾರೆ. ಆದರೆ ಅಪ್ಪಿತಪ್ಪಿಯೂ ಇಂತಹ ಮನೆಮದ್ದುಗಳನ್ನು ಸುಟ್ಟಗಾಯಗಳಿಗೆ ಹಚ್ಚಬೇಡಿ. ಇದರಿಂದ ಗಾಯಗಳು ಮತ್ತಷ್ಟು ಜಾಸ್ತಿಯಾಗುತ್ತದೆ. ಹಾಗಾದ್ರೆ ಅವು ಯಾವುದೆಂಬುದನ್ನು ತಿಳಿಯೋಣ.
*ಬೆಣ್ಣೆ : ಕೆಲವರು ಸುಟ್ಟ ಗಾಯಗಳಿಗೆ ತಂಪಾಗಲಿ ಎಂದು ಬೆಣ್ಣೆಯನ್ನು ಹಚ್ಚುತ್ತಾರೆ. ಆದರೆ ಇದರಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿರುವುದರಿಂದ ಗಾಯ ಮತ್ತಷ್ಟು ಉಲ್ಭಣಗೊಳ್ಳಬಹುದು.
* ತೈಲಗಳು : ಸುಟ್ಟ ಗಾಯಗಳಿಗೆ ಎಣ್ಣೆಗಳನ್ನು ಹಚ್ಚಬೇಡಿ. ಇದರಿಂದ ಬಿಸಿ ಮತ್ತಷ್ಟು ಹೆಚ್ಚಾಗಿ ಗಾಯ ಗುಣವಾಗುವುದಿಲ್ಲ.
*ಕೆಲವರು ಮೊಟ್ಟೆಯ ಬಿಳಿಭಾಗವನ್ನು ಸುಟ್ಟ ಗಾಯಕ್ಕೆ ಹಚ್ಚುತ್ತಾರೆ. ಆದರೆ ಅದರಿಂದ ಬ್ಯಾಕ್ಟೀರಿಯಾ ಸೋಂಕು ಉಂಟಾಗಬಹುದು ಮತ್ತು ಅಲರ್ಜಿಯಾಗಬಹುದು.
*ಟೂತ್ ಪೇಸ್ಟ್ ನ್ನು ಸುಟ್ಟ ಗಾಯಕ್ಕೆ ಹಚ್ಚಬೇಡಿ. ಇದರಲ್ಲಿರುವ ಹಾನಿಕಾರಕ ಕೆಮಿಕಲ್ ಗಳು ಗಾಯವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಬಹುದು.