ಮನೆಯಲ್ಲಿ ಸುಖ ಶಾಂತಿ ಸದಾ ಕಾಲ ಇರಬೇಕು ಅಂದರೆ ಎಲ್ಲವೂ ವಾಸ್ತು ಪ್ರಕಾರವೇ ಇರಬೇಕು. ಆಗ ಮಾತ್ರ ಮನೆಯಲ್ಲಿ ನೆಮ್ಮದಿ ನೆಲೆಸಲು ಸಾಧ್ಯ.
ಈ ಬಾರಿ ನಾವು ದೇವರಿಗೆ ಅರ್ಪಿಸುವ ಹೂಗಳು ವಾಸ್ತು ಶಾಸ್ತ್ರದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನ ತಿಳಿದುಕೊಳ್ಳೋಣ.
ಪ್ರತಿ ದಿನ ಮನೆಯಲ್ಲಿ ದೇವರಿಗೆ ಹೂವನ್ನ ಅರ್ಪಿಸಲಾಗುತ್ತದೆ. ಆದರೆ ದೇವರಿಗೆ ಅರ್ಪಿಸುವ ಈ ಹೂಗಳು ತಾಜಾವಾಗಿದೆಯೇ ಎಂಬುದನ್ನ ಮೊದಲು ಖಚಿತ ಮಾಡಿಕೊಳ್ಳಿ. ನೀವು ದೇವರಿಗೆ ಹೂವು ಅರ್ಪಿಸುತ್ತೀರಾ ಎಂದಾದಲ್ಲಿ ಹೂವು ಬಾಡಿದ ಬಳಿಕ ಸರಿಯಾದ ಸಮಯಕ್ಕೆ ತೆಗೆಯೋದನ್ನ ಮರೆಯಲೇಬೇಡಿ.
ಒಣಗಿದ ಹೂವುಗಳು ದೇವರ ಕೋಣೆಯಲ್ಲಿದೆ ಅಂದರೆ ಅದು ವಾಸ್ತು ಶಾಸ್ತ್ರದ ಪ್ರಕಾರ ಅಶುಭ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ನೆಲೆಸಲಿದೆ. ಹೀಗಾಗಿ ದೇವರಿಗೆ ಹೂವು ಮುಡಿಸೋದ್ರ ಜೊತೆಗೆ ಸರಿಯಾದ ಸಮಯಕ್ಕೆ ಹೂವನ್ನ ತೆಗೆಯೋದನ್ನೂ ಮರೆಯಬೇಡಿ.