
ಸೌತೆಕಾಯಿ ನಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದರಲ್ಲಿ ಸಂದೇಹವಿಲ್ಲ. ಇದರಲ್ಲಿ ವಿಟಮಿನ್ ಮತ್ತು ಮಿನರಲ್‌ಗಳು ಹೇರಳವಾಗಿ ದೊರೆಯುತ್ತದೆ, ಜೊತೆಗೆ ನೀರಿನಂಶವೂ ಅಧಿಕವಾಗಿರುವುದರಿಂದ ಸೌತೆಕಾಯಿ ಸೇವನೆಯಿಂದ ದೇಹವನ್ನು ಹೈಡ್ರೇಟ್ ಆಗಿ ಇಟ್ಟುಕೊಳ್ಳಬಹುದು.
ಆದರೆ ಸೌತೆಕಾಯಿಯನ್ನು ಯಾವ ಸಮಯದಲ್ಲಾದರೂ ತಿನ್ನಬಹುದು ಎಂದುಕೊಳ್ಳಬೇಡಿ. ಸೌತೆಕಾಯಿಯನ್ನು ಹಗಲಿನಲ್ಲೇ ತಿನ್ನಬೇಕು. ಇದರಿಂದ ದೇಹವು ಅನೇಕ ಪೋಷಕಾಂಶಗಳನ್ನು ಪಡೆಯುತ್ತದೆ. ಆದರೆ ನೀವು ರಾತ್ರಿ ಸೌತೆಕಾಯಿ ತಿಂದರೆ ನಿಮ್ಮ ಆರೋಗ್ಯಕ್ಕೆ ನಷ್ಟವಾಗುತ್ತದೆ.
ಜೀರ್ಣಕ್ರಿಯೆಯ ಮೇಲೆ ಪರಿಣಾಮ: ಸೌತೆಕಾಯಿಯಲ್ಲಿ ಕುಕುರ್ಬಿಟಾಸಿನ್ ಇರುತ್ತದೆ. ಹಾಗಾಗಿ ನಿಮ್ಮ ಜೀರ್ಣಕ್ರಿಯೆಯು ಬಲವಾಗಿದ್ದಾಗ ಮಾತ್ರ ಅದು ಜೀರ್ಣವಾಗುತ್ತದೆ. ನಿದ್ರೆಯ ಸಮಯದಲ್ಲಿ ತಿಂದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ. ರಾತ್ರಿ ಸೌತೆಕಾಯಿಯನ್ನು ತಿನ್ನುವುದರಿಂದ, ಹೊಟ್ಟೆ ಭಾರವಾಗಲು ಪ್ರಾರಂಭಿಸುತ್ತದೆ. ಮಲಬದ್ಧತೆ, ಅಜೀರ್ಣ, ಹೊಟ್ಟೆ ಉಬ್ಬರಿಸುವಿಕೆ ಸೇರಿದಂತೆ ಅನೇಕ ಸಮಸ್ಯೆಗಳಾಗಬಹುದು.
ನಿದ್ರೆಯ ಮೇಲೆ ಪರಿಣಾಮ: ರಾತ್ರಿ ಸೌತೆಕಾಯಿ ತಿಂದರೆ ನೆಮ್ಮದಿಯ ನಿದ್ದೆ ಬರುವುದು ಕಷ್ಟ. ಏಕೆಂದರೆ ಹೊಟ್ಟೆ ಭಾರವಾಗಿ ಸರಿಯಾಗಿ ಮಲಗಲು ಸಾಧ್ಯವಾಗುವುದಿಲ್ಲ. ಇದರ ಹೊರತಾಗಿ ಜೀರ್ಣಕ್ರಿಯೆ ಕೆಟ್ಟರೆ ಗ್ಯಾಸ್‌ನಿಂದಾಗಿ ಸರಿಯಾಗಿ ನಿದ್ರೆ ಬರುವುದಿಲ್ಲ. ಸೌತೆಕಾಯಿಯಲ್ಲಿ ಹೆಚ್ಚಿನ ನೀರಿನಂಶವಿರುವುದರಿಂದ ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಎದ್ದು ಹೋಗಬೇಕಾಗಬಹುದು.
ಹೆಚ್ಚಿನ ಆರೋಗ್ಯ ತಜ್ಞರು ಸೌತೆಕಾಯಿಯನ್ನು ಹಗಲಿನಲ್ಲಿ ತಿನ್ನಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಸೌತೆಕಾಯಿಯ ಸೇವನೆಯು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿ ಶೇ.95ರಷ್ಟು ನೀರು ಇರುವುದರಿಂದ ದೇಹವನ್ನು ತೇವಾಂಶದಿಂದ ಇಡಬಹುದು. ಇದಲ್ಲದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಮತ್ತು ಮೂಳೆಗಳನ್ನು ಬಲಪಡಿಸವಲ್ಲಿ ಇದು ಸಹಕಾರಿ.