ಹಿಂದೂ ಧರ್ಮದಲ್ಲಿ ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷ್ಯವನ್ನು ಹೇಳಲಾಗಿದೆ. ಯಾವ ಕೆಲಸ ಮಾಡಬೇಕು? ಯಾವಾಗ ಮಾಡಬೇಕು ಎನ್ನುವ ವಿವರ ಧರ್ಮಗ್ರಂಥಗಳಲ್ಲಿ ಸಿಗುತ್ತದೆ. ಹಿಂದೂ ಧರ್ಮದ ಪ್ರಕಾರ ತಿಂಗಳಲ್ಲಿ ನಾಲ್ಕು ದಿನ ಹುಡುಗಿಯರ ಸಹವಾಸ ಮಾಡಬಾರದಂತೆ.
ಅಷ್ಠಮಿ, ಚತುರ್ದಶಿ, ಅಮವಾಸ್ಯೆ ಮತ್ತು ಸಂಕಷ್ಠಿಯಂದು ಶಾರೀರಿಕ ಸಂಬಂಧ ಬೆಳೆಸಬಾರದಂತೆ. ಇಷ್ಟೇ ಅಲ್ಲ ಹಬ್ಬದ ದಿನಗಳಲ್ಲಿಯೂ ಶಾರೀರಿಕ ಸಂಬಂಧ ಬೆಳೆಸಬಾರದು. ವಿಶೇಷವಾಗಿ ದೀಪಾವಳಿ, ಶಿವರಾತ್ರಿ, ನವರಾತ್ರಿ ಹಾಗೂ ಹೋಳಿಯಲ್ಲಿ ಅಪ್ಪಿತಪ್ಪಿಯೂ ದಂಪತಿ ಒಂದಾಗಬಾರದು. ಧರ್ಮ ಗ್ರಂಥಗಳಲ್ಲಿ ಇದಕ್ಕೆ ಧಾರ್ಮಿಕ ಕಾರಣ ಮಾತ್ರ ನೀಡಿಲ್ಲ ವೈಜ್ಞಾನಿಕ ಕಾರಣಗಳನ್ನೂ ನೀಡಿದ್ದಾರೆ.
ಹುಣ್ಣಿಮೆಯಂದು, ಅಮಾವಾಸ್ಯ ಮತ್ತು ಚತುರ್ದಶಿಯಂದು ಚಂದ್ರ, ಸೂರ್ಯ ಮತ್ತು ಭೂಮಿಯು ಒಂದೇ ನೇರ ರೇಖೆಯಲ್ಲಿ ಬರುತ್ತವೆ. ಇದು ಮಾನವನ ದೇಹದ ಮೇಲೆ ಪರಿಣಾಮ ಬೀರುತ್ತದೆ. ಅಷ್ಠಮಿ ತಿಥಿಯಂದು ಚಂದ್ರ-ಸೂರ್ಯ ಒಂದೇ ರೇಖೆಯಲ್ಲಿರುತ್ತವೆ.ಇವು ದೇಹದ ಮೇಲೆ ಪ್ರಭಾವ ಬೀರುತ್ತವೆ. ಈ ಸಂದರ್ಭದಲ್ಲಿ ಒಂದಾದ್ರೆ ಗರ್ಭಧಾರಣೆ ಸಾಧ್ಯತೆಯಿರುತ್ತದೆ. ಹುಟ್ಟುವ ಮಗು ದುರ್ಬಲನಾಗಿ ಹುಟ್ಟುತ್ತಾನೆ. ಮಗು ಅಲ್ಪ ಆಯಸ್ಸು ಹೊಂದುವ ಸಾಧ್ಯತೆಯೂ ಹೆಚ್ಚಿರುತ್ತದೆ.