ಇದು ಡಿಜಿಟಲ್ ಯುಗ. ದಿನೇ ದಿನೇ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ನಲ್ಲಿ ಬಿಲ್ ಪಾವತಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ನೀವು ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಸ್ತಿರೆಂದಾದ್ರೆ ಈ ಸುದ್ದಿಯನ್ನು ಅವಶ್ಯವಾಗಿ ಓದಿ.
ಎಲ್ಲ ಬಿಲ್ ಪಾವತಿಗೂ ಕ್ರೆಡಿಟ್ ಕಾರ್ಡ್ ಉತ್ತಮವಲ್ಲ. ಕೆಲವೊಂದು ವಿಷಯದಲ್ಲಿ ಕ್ರೆಡಿಟ್ ಕಾರ್ಡ್ ಬಳಸದೆ ಇರೋದು ಉತ್ತಮ. ಅದ್ರಲ್ಲಿ ಮನೆ ಬಿಲ್ ಕೂಡ ಒಂದು. ತಿಂಗಳ ಕೊನೆಯಲ್ಲಿ ನಗದು ಖಾಲಿಯಾಗಿರುತ್ತದೆ. ಹಾಗಾಗಿ ಅನೇಕರು ಕರೆಂಟ್ ಬಿಲ್, ಕೇಬಲ್ ಬಿಲ್ ಅದು ಇದು ಅಂತಾ ಎಲ್ಲ ಬಿಲ್ ಗೆ ಕ್ರೆಡಿಟ್ ಕಾರ್ಡ್ ಬಳಸ್ತಾರೆ. ಆದ್ರೆ ಇದರಿಂದ ಪ್ರತಿದಿನ ವಿಧಿಸುವ ಬಡ್ಡಿ ದರದ ಹಿನ್ನೆಲೆಯಲ್ಲಿ ಕ್ರೆಡಿಟ್ ಕಾರ್ಡ್ ಬಿಲ್ ಜಾಸ್ತಿಯಾಗುತ್ತದೆ.
ಸಾಮಾನ್ಯವಾಗಿ ಕಾರು ವಿತರಕರು ಕ್ರೆಡಿಟ್ ಕಾರ್ಡ್ ನಲ್ಲಿ ಪೇಮೆಂಟ್ ಪಡೆಯೋದಿಲ್ಲ. ಕೆಲವರು ಅಲ್ಪ ಮಟ್ಟದ ಹಣವನ್ನು ಮಾತ್ರ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುತ್ತಾರೆ. ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಡೆದಲ್ಲಿ ಒಂದಕ್ಕಿಂತ ಹೆಚ್ಚು ಪಟ್ಟಿನ ಹಣವನ್ನು ಸಂಬಂಧಿಸಿದ ಬ್ಯಾಂಕ್ ಹಾಗೂ ಕಂಪನಿಗಳಿಗೆ ಪಾವತಿಸಬೇಕಾಗುತ್ತದೆ. ಹಾಗಾಗಿ ಮೊದಲು ಬ್ಯಾಂಕ್ ಗೆ ಹೋಗಿ ಸಾಲ ಪಡೆದು ನಂತ್ರ ಕಾರು ಖರೀದಿ ಮಾಡಿ.
ಎಜುಕೇಷನ್ ಗಾಗಿ ಎಂದೂ ಕ್ರೆಡಿಟ್ ಕಾರ್ಡ್ ಮೂಲಕ ಲೋನ್ ಪಡೆಯಬೇಡಿ. ಹೀಗೆ ಮಾಡಿದ್ರೆ ಒಂದಕ್ಕೆ ಮೂರು ಪಟ್ಟು ಬಡ್ಡಿ ಕಟ್ಟಬೇಕಾಗುತ್ತದೆ.
ಸಣ್ಣಪುಟ್ಟ ವಸ್ತುಗಳ ಖರೀದಿಗೂ ಕ್ರೆಡಿಟ್ ಕಾರ್ಡ್ ಬೇಡ. ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿ ಮಾಡಿದ್ರೆ ಮಿತಿ ಮೀರಿ ಖರ್ಚು ಮಾಡ್ತೀರಾ. ಹಾಗೆ ವಿನಾಃ ಕಾರಣ ಕ್ರೆಡಿಟ್ ಕಾರ್ಡ್ ಬಿಲ್ ಹೆಚ್ಚಾಗಲು ನೀವೇ ಕಾರಣರಾಗ್ತೀರಾ.
ವೈದ್ಯಕೀಯ ಖರ್ಚನ್ನು ಕ್ರೆಡಿಟ್ ಕಾರ್ಡ್ ನಲ್ಲಿ ಮಾಡುವ ಮೊದಲು ಅಲ್ಲಿನ ನಿಯಮಗಳನ್ನು ಸರಿಯಾಗಿ ಓದಿ ತಿಳಿದುಕೊಳ್ಳಿ. ನಂತ್ರ ಕ್ರೆಡಿಟ್ ಕಾರ್ಡ್ ಬಳಸಿ.
ಮನೆಯವರ ಜೊತೆ ಪ್ರವಾಸಕ್ಕೆ ಹೋಗುವ ಮೊದಲು ಸ್ವಲ್ಪ ನಗದನ್ನು ಕೈನಲ್ಲಿಟ್ಟುಕೊಳ್ಳಿ. ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಬಳಸೋದು ಕಷ್ಟ. ಜೊತೆಗೆ ಸಣ್ಣ ಸಣ್ಣ ಖರ್ಚು ಬಿಲ್ ಬಂದ ನಂತ್ರ ದೊಡ್ಡದಾಗಿ ಕಾಣುತ್ತದೆ.
ಗ್ರಾಹಕರನ್ನು ಸೆಳೆಯಲು ಕಂಪನಿಗಳು ಹೊಸ ಹೊಸ ಆಫರ್ ನೀಡುತ್ತವೆ. ಕಡಿಮೆ ಬೆಲೆಗೆ ಸಿಗ್ತಾ ಇದೆ ಎನ್ನುವ ಕಾರಣಕ್ಕೆ ವಸ್ತುಗಳನ್ನು ಖರೀದಿ ಮಾಡಬೇಡಿ. ನಿಮಗೆಷ್ಟು ಅವಶ್ಯಕ ಎಂಬುದನ್ನು ಮೊದಲು ನಿರ್ಧಾರ ಮಾಡಿಕೊಂಡು ನಂತ್ರ ಖರೀದಿ ಮಾಡಿ. ಸಾಮಾನ್ಯವಾಗಿ ಸೇಲ್ ನಲ್ಲಿ ನಾವು ಖರೀದಿ ಮಾಡುವ ಬಹುತೇಕ ವಸ್ತುಗಳ ಅವಶ್ಯಕತೆ ನಮಗಿರೋದಿಲ್ಲ.
ಅಸುರಕ್ಷಿತ ಆನ್ಲೈನ್ ವೆಬ್ ಸೈಟ್ ಗಳಲ್ಲಿ ವಸ್ತು ಖರೀದಿ ಮಾಡುವ ವೇಳೆ ಕ್ರೆಡಿಟ್ ಕಾರ್ಡ್ ಬಳಕೆ ಬೇಡ. https ಇದ್ದಲ್ಲಿ ಮಾತ್ರ ಅದು ಸುರಕ್ಷಿತ. https ಇಲ್ಲವಾದಲ್ಲಿ ಆ ವೆಬ್ ಸೈಟ್ ಸುದ್ದಿಗೆ ಹೋಗಬೇಡಿ.