ಹಣ್ಣುಗಳ ಬೀಜಗಳಲ್ಲಿ ಪೋಷಕಗಳಿರುತ್ತವೆ ಎಂದು ಎಲ್ಲಾ ಹಣ್ಣಿನ ಬೀಜಗಳನ್ನು ತಿನ್ನುವುದು ಸರಿಯಲ್ಲ.
ಏಕೆಂದರೆ ಕೆಲ ಹಣ್ಣಿನ ಬೀಜಗಳು ಪ್ರಯೋಜನಕ್ಕೆ ಬರುವುದಿಲ್ಲ. ಅದರಲ್ಲೂ ಸೇಬು ಹಣ್ಣಿನ ಬೀಜಗಳನ್ನು ಮರೆತೂ ತಿನ್ನಬಾರದು. ಒಂದು ವೇಳೆ ಹಲ್ಲಿಗೆ ಸಿಕ್ಕಿಹಾಕಿಕೊಂಡರೆ ಗಾಬರಿ ಪಡದೆ ತಕ್ಷಣವೇ ಬಿಸಾಡಬೇಕು.
ಏಕೆಂದರೆ ಈ ಬೀಜಗಳಲ್ಲಿ ಅಮೈಡಾಲಿನ್ ಎಂಬ ಪದಾರ್ಥ ಇರುತ್ತದೆ. ಇದು ದೇಹಕ್ಕೆ ಒಳ್ಳೆಯದಲ್ಲ. ಹೀಗಾಗಿ ಈ ಬೀಜಗಳನ್ನು ತಿಂದರೆ ಉಸಿರಾಟದ ತೊಂದರೆ ಎದುರಿಸಬೇಕಾಗುತ್ತದೆ.
ಅಷ್ಟೇ ಅಲ್ಲ ತಲೆನೋವು, ವಾಂತಿ, ಬಲಹೀನತೆ, ತಲೆಸುತ್ತು ಇತ್ಯಾದಿ ಲಕ್ಷಣಗಳು ಉಂಟಾಗಬಹುದು. ಮಕ್ಕಳು ಇದನ್ನು ಸೇವಿಸಲೇಬಾರದು. ಒಂದೆರಡು ಬೀಜಗಳಿಂದ ಅಷ್ಟು ಪರಿಣಾಮ ಇಲ್ಲದಿದ್ದರೂ ಬಾಯಿಗೆ ಸಿಕ್ಕ ತಕ್ಷಣ ಆಪಲ್ ಬೀಜಗಳನ್ನು ಉಗಿದರೆ ಒಳ್ಳೆಯದು.