ಅಗಾಗ ಅಪ್ಪುಗೆ ಪಡೆಯುವುದರಿಂದ ಅಥವಾ ನೀಡುವುದರಿಂದ ಒತ್ತಡ ರಹಿತವಾಗಿ ನೆಮ್ಮದಿಯಿಂದ ಬದುಕಬಹುದು ಎನ್ನುತ್ತಾರೆ ವೈದ್ಯರು. ಇದು ನಿಜ ಕೂಡಾ ಹೌದು.
ತಬ್ಬಿಕೊಳ್ಳುವುದರಿಂದ ಭಾವನಾತ್ಮಕ ಬೆಂಬಲ ಮಾತ್ರವಲ್ಲ, ಉತ್ತಮ ಆರೋಗ್ಯವೂ ದೊರೆಯುತ್ತದಂತೆ. ಅಪ್ಪುಗೆಯಿಂದ ದೇಹದಲ್ಲಿ ಆಕ್ಸಿಟೋಸಿಸ್ ಹಾರ್ಮೋನ್ ಪ್ರಮಾಣ ಹೆಚ್ಚಿ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸನ್ನು ಶಾಂತಗೊಳಿಸುತ್ತದೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ.
ಅಪ್ಪುಗೆ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಇದು ನರಮಂಡಲ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಸಂತೋಷವನ್ನುಂಟು ಮಾಡುತ್ತದೆ. ಅದಕ್ಕಾಗಿ ದಿನಕ್ಕೊಂದು ಬಾರಿಯಾದರೂ ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳಿ.
ತಬ್ಬಿಕೊಳ್ಳುವುದರಿಂದ ಪಾಸಿಟಿವ್ ವೈಬ್ರೆಷನ್ ಚಾಲನೆಗೊಂಡು ಖುಷಿಯ ಹಾರ್ಮೋನ್ ಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದು ನೋವನ್ನು ನಿವಾರಿಸಿ ಉತ್ತಮ ಮನಸ್ಥಿತಿಯನ್ನು ನೀಡುತ್ತದೆ. ನಿಮಗೆ ಶಾಂತ ಹಾಗೂ ತೃಪ್ತಿಯ ಭಾವವನ್ನು ಕೊಡುತ್ತದೆ.
ಇವೆಲ್ಲವೂ ಸರಿಯಿದ್ದಾಗ ರೋಗ ನಿರೋಧಕ ವ್ಯವಸ್ಥೆಯೂ ಸದೃಢವಾಗಿ ಕೆಲಸ ಮಾಡುತ್ತದೆ. ಹಾಗಾಗಿ ಅಪ್ಪುಗೆ ನಮ್ಮ ದೇಹದೊಳಗೆ ಹಲವು ಸಕಾರಾತ್ಮಕ ಕಾರ್ಯಗಳಿಗೆ ನೆರವಾಗುತ್ತದೆ. ಹೀಗಾಗಿ ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಂಡು ನೀವು ಖುಷಿಯಾಗಿರಿ, ಅವರಿಗೂ ಪ್ರೀತಿ ಹಂಚಿ.