ಜನಸಾಮಾನ್ಯರು ನಂಬಲೂ ಅಸಾಧ್ಯವಾದಂತಹ ಭೀಭತ್ಸ ಘಟನೆ ಇದು. 7 ಮಹಿಳೆಯರು ಸೇರಿ ಪುಟ್ಟ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಈ ಕೃತ್ಯದ ಬಗ್ಗೆ ಕೇಳಿದ್ರೆ ಎಂಥವರ ಹೃದಯವೂ ರೋದಿಸುತ್ತದೆ.
10 ವರ್ಷದ ಬಾಲಕಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಏಳು ಮಹಿಳೆಯರನ್ನು ದೋಷಿ ಎಂದು ಬಿಹಾರದ ದರ್ಭಾಂಗ ನ್ಯಾಯಾಲಯ ತೀರ್ಪು ನೀಡಿದೆ. ADG-9 ಕೋರ್ಟ್ ಇವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಘಟನೆ ನಡೆದು 13 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. 2009ರಲ್ಲಿ ನಡೆದ ಘಟನೆ ಇದು.
ಯೋಗೇಂದ್ರ ಯಾದವ್ ಎಂಬಾತ ಜಮೀನಿನ ವಿಚಾರವಾಗಿ ಕುಟುಂಬದವರೊಂದಿಗೆ ಜಗಳ ಮಾಡಿಕೊಂಡಿದ್ದರು. ಆತನ ಪುತ್ರಿ 10 ವರ್ಷದ ಈ ಬಾಲಕಿ ತಂದೆಗೆ ಊಟ ತೆಗೆದುಕೊಂಡು ಹೋಗುತ್ತಿದ್ಲು. ಈ ವೇಳೆ ಅವಳನ್ನು ತಡೆದ 7 ಮಹಿಳೆಯರು ಅಮಾನುಷವಾಗಿ ಥಳಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಕೊಲೆಯಾದ ಬಾಲಕಿಯ ಕುಟುಂಬದವರು 7 ಮಹಿಳೆಯರ ವಿರುದ್ಧ ಕೇಸ್ ದಾಖಲು ಮಾಡಿದ್ದರು. ಸದ್ಯ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಆದಷ್ಟು ಬೇಗ ಅವರನ್ನು ಜೈಲಿಗೆ ತಳ್ಳುವಂತೆ ಮೃತ ಬಾಲಕಿಯ ಕುಟುಂಬ ಒತ್ತಾಯಿಸಿದೆ. ಕೋರ್ಟ್ ತೀರ್ಪಿನಿಂದಾಗಿ ಕೊಲೆಯಾದ ಅಮಾಯಕ ಬಾಲಕಿಗೆ ನ್ಯಾಯ ಸಿಕ್ಕಂತಾಗಿದೆ.